ಅಂಡಮಾನ್ ದ್ವೀಪದಲ್ಲಿ ನಿರಂತರವಾಗಿ ಭೂಮಿ ಕಂಪಿಸುತ್ತಿದೆ. ಬುಧವಾರ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದೆ. 

ಅಂಡಮಾನ್ : ಅಂಡಮಾನ್ ದ್ವೀಪದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ. 

ಬುಧವಾರ ಮುಂಜಾನೆ 6.9ಕ್ಕೆ 5.6 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದಾಗಿ ಹವಾಮಾನ ಇಲಾಖೆ ಹೇಳಿದೆ. 10 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ಇದ್ದು, ಇದರಿಂದ ಯಾವುದೇ ರೀತಿಯಾದ ಪ್ರಾಣ ಹಾನಿ ವರದಿಯಾಗಿಲ್ಲ.

ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಅಂಡಮಾನ್ ದ್ವೀಪದಲ್ಲಿ ನಿರಂತರವಾಗಿ ಭೂಮಿ ಕಂಪಿಸುತ್ತಿದ್ದು, ಮಂಗಳವಾರ ಮಧ್ಯಾಹ್ನದ ವೇಳೆ 4.1ರ ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. 

ಹೆಚ್ಚು ಹೆಚ್ಚು ಮಧ್ಯಮ ಹಾಗೂ ಲಘು ಭೂಕಂಪನಗಳಿಗೆ ದ್ವೀಪ ತುತ್ತಾಗುತ್ತಿದ್ದು, ಕಳೆದ ಏಪ್ರಿಲ್ 1 ರಿಂದ ಒಟ್ಟು 20 ಬಾರಿ ಭೂಮಿ ಕಂಪಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ.