2 ಬಸ್ಸುಗಳ ನಡುವೆ ಸಂಭವಿಸಿದ ಭಾರೀ ಬಸ್ ಅಪಘಾತದಲ್ಲಿ 47 ಮಂದಿ ಮೃತಪಟ್ಟ ಭೀಕರ ಘಟನೆಯೊಂದು ನಡೆದಿದೆ. 

ಹರಾರೆ : ಒಂದಕ್ಕೊಂದು ಬಸ್ ಡಿಕ್ಕಿಯಾಗಿ ಸಂಭವಿಸಿದ ಭಾರೀ ಅಪಘಾತದಲ್ಲಿ 47 ಮಂದಿ ಮೃತಪಟ್ಟಿರುವ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಂಬಾಬ್ವೆ ರಾಜಧಾನಿ ಹರಾರೆಗೆ ತೆರಳುತ್ತಿದ್ದ ವೇಳೆ ಮುಸಾಪೆ ನಗರದ ಬಳಿ ಅಪಘಾತ ಸಂಭವಿಸಿದೆ. 

2 ಬಸ್ಸುಗಳ ನಡುವೆ ಸಂಭವಿಸಿದ ಭಾರೀ ಅಪಘಾತದಲ್ಲಿ ಒಟ್ಟು 47 ಮಂದಿ ಮೃತಪಟ್ಟಿದ್ದು, ಎರಡೂ ಬಸ್ಸುಗಳಲ್ಲಿದ್ದ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಜಿಂಬಾಬ್ವೆ ಸಾರಿಗೆ ಸಚಿವರು ಈ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಇದೊಂದು ದುಃಖಕರ ಸಂಗತಿ ಎಂದಿದ್ದಾರೆ.