- ಪಾಸ್’ಪೋರ್ಟ್’ಗಾಗಿ ಶೇ. 45  ಮಂದಿ ಲಂಚ -ಪೊಲೀಸ್ ಪರಿಶೀಲನೆಯ ವೇಳೆಯೇ ಹೆಚ್ಚಿನವರು ಲಂಚ ನೀಡುವುದು ಎಂದು ತಿಳಿದು ಬಂದಿದೆ. - ಲೋಕಲ್ ಸರ್ಕಲ್ಸ್ ಎಂಬ ನಾಗರಿಕ ಹಕ್ಕುಗಳ ವೇದಿಕೆ ನಡೆಸಿದ ಸಮೀಕ್ಷೆಯಿಂದ ಮಾಹಿತಿ ಹೊರಬಿದ್ದಿದೆ. 

ನವದೆಹಲಿ (ಜು. 17): ದೇಶದಲ್ಲಿ ಪಾಸ್‌ಪೋರ್ಟ್ ಪಡೆಯಲು ಶೇ.46 ರಷ್ಟು ಮಂದಿ ಲಂಚ ಪಾವತಿಸಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ಎಂಬ ನಾಗರಿಕ ಹಕ್ಕುಗಳ ವೇದಿಕೆಯೊಂದು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಪೊಲೀಸ್ ಪರಿಶೀಲನೆಯ ವೇಳೆಯೇ ಹೆಚ್ಚಿನವರು ಲಂಚ ನೀಡುವುದು. ಶೇ.37 ಮಂದಿ ಪೊಲೀಸ್ ಪರಿಶೀಲನೆಯ ವೇಳೆ, ಶೇ.4 ಮಂದಿ ಪೋಸ್ಟ್‌ಮ್ಯಾನ್‌ಗಳು ಮತ್ತು ಶೇ.5 ಮಂದಿ ಏಜೆಂಟ್‌ಗಳ ಮೂಲಕ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ. ಆದಾಗ್ಯೂ, ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಸೇವೆ ಚೆನ್ನಾಗಿದೆ ಎಂದು ಹೆಚ್ಚಿನವರು ಹೇಳಿದ್ದಾರೆ.

ಶೇ.53 ಮಂದಿ ಪಾಸ್‌ಪೋರ್ಟ್ ಸೇವೆ ದಕ್ಷತೆಯಿಂದ ಕೂಡಿದೆ ಎಂದಿದ್ದಾರೆ.