ಸುವರ್ಣನ್ಯೂಸ್, ಕನ್ನಡಪ್ರಭದ ಮೂವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

First Published 25, Jan 2018, 11:45 AM IST
45 Get Media academy awards
Highlights

ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಸಮಾರಂಭ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಜರುಗಿತು.

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಸಮಾರಂಭ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಜರುಗಿತು.

ಕನ್ನಡಪ್ರಭದ ತುಮಕೂರು ಪ್ರಧಾನ ವರದಿಗಾರ ಉಗಮ ಶ್ರೀನಿವಾಸ್, ಸುವರ್ಣ ನ್ಯೂಸ್‌ನ ಇನ್‌ಪುಟ್ ಎಡಿಟರ್ ಎಂ.ಸಿ.ಶೋಭಾ, ಚಿತ್ರಲೋಕ ಡಾಟ್‌ಕಾಮ್‌ನ ಸಂಸ್ಥಾಪಕ ಕೆ.ಎಂ.ವೀರೇಶ್, ಕನ್ನಡಪ್ರಭದ ಮೈಸೂರು ಛಾಯಾಗ್ರಾಹಕ ಎಂ.ಎಸ್.ಬಸವಣ್ಣ, ಹಿರಿಯ ಪತ್ರಕರ್ತ ಡಿ.ಶಿವಲಿಂಗಪ್ಪ, ದಿ ಎಕನಾಮಿಕ್ಸ್ ಟೈಮ್ಸ್‌ನ ಸಹಾಯಕ ಸಂಪಾದಕಿ ಸೌಮ್ಯಾ ಅಜಿ, ಸಂಜೆವಾಣಿ ಹಿರಿಯ ವರದಿಗಾರ ವೈ.ಎಸ್.ಎಲ್. ಸ್ವಾಮಿ ಸೇರಿದಂತೆ ಒಟ್ಟು 45 ಪತ್ರಕರ್ತರಿಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ ತಳ ಸಮುದಾಯದ ಬಗೆಗಿನ ಬರಹಗಳ ಅಂಕಣಗಾರರಿಗೆ ನೀಡುವ ವಿಭಾಗದಲ್ಲಿ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರಿಗೆ ‘ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ, ಅಕಾಡೆಮಿ ಕಾರ್ಯದರ್ಶಿ ಎಸ್.ಶಂಕರಪ್ಪ ಇದ್ದರು.

loader