ಕಲಬುರಗಿ: ಬಿರು ಬೇಸಿಗೆಯಿಂದ ತತ್ತರಿಸಿದ ಕಲಬುರಗಿ ಜಿಲ್ಲೆಯಲ್ಲಿ ಕಳೆದ ೪ ದಿನಗಳಿಂದ 43ರಿಂದ 44 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದ್ದು, ಶನಿವಾರ  44.1 ಡಿಗ್ರಿ ಉಷ್ಣಾಂಶ ದಾಖಲಾಗಿದೆ. 

ಇದರೊಂದಿಗೆ ಈ ವರ್ಷ ರಾಜ್ಯದಲ್ಲೇ ದಾಖಲಾದ ಹೆಚ್ಚಿನ ತಾಪಮಾನ ಇದಾಗಿದೆ ಎನ್ನಲಾಗಿದೆ. ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ ಉಷ್ಣಾಂಶ ಸರಾಸರಿ 3.1 ಡಿಗ್ರಿಯಷ್ಟು ಹೆಚ್ಚಳವಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಬಿಸಿಲಿನ ಹೊಡೆತಕ್ಕೆ ಕಲಬುರಗಿ ಜನತೆ ತತ್ತರಿಸಿದ್ದು, ತಾಪದಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದಾರೆ.