Asianet Suvarna News Asianet Suvarna News

ರಾಜಧಾನಿಯಲ್ಲಿ ಈ 2 ದಿನ ಸಿಗೋದಿಲ್ಲ ಪೆಟ್ರೋಲ್, ಡೀಸೆಲ್

ಗ್ರಾಹಕರೇ ಎಚ್ಚರ. ಈ ಎರಡು ದಿನಗಳ ಕಾಲ ರಾಜಧಾನಿಯಲ್ಲಿ ಪೆಟ್ರೋಲ್ ಡೀಸೆಲ್ ಸಿಗೋದಿಲ್ಲ. 

400 Petrol Pumps To Be Shut In New Delhi On October 22
Author
Bengaluru, First Published Oct 16, 2018, 2:08 PM IST

ನವದೆಹಲಿ :  ದಿನದಿನಕ್ಕೆ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದು ಜನರಿಗೆ ತಲೆ ನೋವಾಗಿದೆ. ಇದೇ ವೇಳೆ  ರಾಷ್ಟ್ರ ರಾಜಧಾನಿಯಲ್ಲಿ ಅಕ್ಟೋಬರ್ 22 ರಂದು 400 ಪೆಟ್ರೋಲ್ ಬಂಕ್ ಗಳನ್ನು ಮುಚ್ಚಲಾಗುತ್ತಿದೆ. 

ದಿಲ್ಲಿ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ತೆಗೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು ಈ ನಿಟ್ಟಿನಲ್ಲಿ400 ಪೆಟ್ರೋಲ್ ಬಂಕ್ ಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುತ್ತಿದೆ. 

ಇದರಲ್ಲಿ ಸಿಎನ್ ಜಿ ಪಂಪ್ ಗಳೂ ಕೂಡ ಸೇರಿದ್ದು, ಮುಂಜಾನೆ 6 ಗಂಟೆಯಿಂದ  ಮರುದಿನ ಅಂದರೆ ಅಕ್ಟೋಬರ್ 23ರ ಸಂಜೆ 5 ಗಂಟೆವರೆಗೆ ಮುಚ್ಚಲಿವೆ ಎಂದು ಪೆಟ್ರೋಲ್ ಬಂಕ್ ಅಸೋಸಿಯೇಷನ್  ತಿಳಿಸಿದೆ. 

ಕೇಂದ್ರ ಸರ್ಕಾರ ಅಕ್ಟೋಬರ್ 4 ರಂದು ತೈಲ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 2.5 ರು. ಇಳಿಕೆ ಮಾಡಲಾಗಿತ್ತು. ಆದರೂ ಕೂಡ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ದಿನ ದಿನವೂ ಕೂಡ ಏರಿಕೆಯಾಗುತ್ತಿದೆ.

Follow Us:
Download App:
  • android
  • ios