ನಕಲಿ ಚಿನ್ನದ ಬಿಸ್ಕತ್ ಡಬ್ಲಿಂಗ್ ಪ್ರಕರಣದಲ್ಲಿ ಪೊಲೀಸರ ಪಾತ್ರ ಮೇಲ್ನೋಟಕ್ಕೆ ಸಾಬೀತಾಗಿದ್ದು ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಕೋಲಾರ (ಡಿ. 21): ನಕಲಿ ಚಿನ್ನದ ಬಿಸ್ಕತ್ ಡಬ್ಲಿಂಗ್ ಪ್ರಕರಣದಲ್ಲಿ ಪೊಲೀಸರ ಪಾತ್ರ ಮೇಲ್ನೋಟಕ್ಕೆ ಸಾಬೀತಾಗಿದ್ದು ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಮುಳಬಾಗಿಲು ಸಿಪಿಐ ಎನ್.ಎನ್.ರಾಮರೆಡ್ಡಿ, ಪಿಎಸ್​​ಐ ಆರ್.ದಯಾನಂದ, ಎಎಸ್​​​​​​ಐ ವೆಂಕಟಾಚಲಪತಿ, ಪೇದೆ ಗುರುಪ್ರಸಾದ್ ಅಮಾನತುಗೊಂಡಿರುವವರು.

ನವೆಂಬರ್ 26 ರಂದು ಡಬ್ಲಿಂಗ್ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ಮೂವರನ್ನ ಅರೆಸ್ಟ್ ಮಾಡಿ, ಭಾಗಿಯಾಗಿದ್ದ ಪೊಲೀಸ್ ಪೇದೆಯನ್ನ ರಕ್ಷಣೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು. ಇದರಲ್ಲಿ ಪೇದೆ ಗುರುಪ್ರಸಾದ್ ಭಾಗಿಯಾಗಿರುವುದು ಸಾಬೀತಾಗಿತ್ತು.

ಕೋಲಾರ ಡಿಸಿಬಿ ಎಎಸ್​​ಐ ವೆಂಕಟಾಚಲಪತಿ ತಂಡ ತನಿಖೆ 6 ಮಂದಿಯನ್ನ ಅರೆಸ್ಟ್ ಮಾಡಿ, ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ವರದಿ ಕೊಟ್ಟಿದ್ದರು. ಕೋಲಾರ ಎಸ್ಪಿ ಡಾ.ದಿವ್ಯ ಮಂಗಳವಾರ ತಡರಾತ್ರಿ ಅಮಾನತು ಆದೇಶ ನೀಡಿದ್ದಾರೆ.