ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Jul 2018, 3:45 PM IST
4 People Nominated To Rajya Sabha
Highlights

ಇಂದು ನಾಲ್ವರನ್ನು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಾಮನಿರ್ದೇಶನ ಮಾಡಿದ್ದಾಗಿ ಪ್ರಧಾನಿ ಕಚೇರಿ ಸ್ಪಷ್ಟಪಡಿಸಿದೆ. 

ನವದೆಹಲಿ :  ರಾಜ್ಯಸಭೆಗೆ ಶನಿವಾರ ನಾಲ್ವರನ್ನು ನಾಮನಿರ್ದೇಶನ ಮಾಡಿದ್ದಾಗಿ ಪ್ರಧಾನಿ ಕಚೇರಿ ತಿಳಿಸಿದೆ. ಮಾಜಿ ಎಂಪಿ ರಾಮ್ ಶಕಲ್, ಆರ್ ಎಸ್ ಎಸ್ ಸಂಚಾಲಕ ರಾಕೇಶ್ ಸಿನ್ಹಾ,  ಕ್ಲಾಸಿಕಲ್ ಡ್ಯಾನ್ಸರ್ ಸೋನಾಲ್ ಮಾನ್ ಸಿಂಗ್, ಕೆತ್ತನೆ ಕಲಾವಿದ ರಘುನಾಥ್ ಮೊಹಪಾತ್ರ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ. 

 ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆ ನಾಮನಿರ್ದೇಶನ ಮಾಡಿದ್ದಾರೆ. ಆರ್ಟಿಕಲ್ 80[1][ಎ] ಅಡಿಯಲ್ಲಿ ವಿಶೇಷ ಕ್ಷೇತ್ರದಲ್ಲಿ ಗುರುತಿಸಿಕೊಂಡ 12 ಜನರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಅಧಿಕಾರವನ್ನು ರಾಷ್ಟ್ರಪತಿ ಹೊಂದಿರುತ್ತಾರೆ. 

ಸಾಹಿತ್ಯ, ವಿಜ್ಞಾನ, ಸಾಮಾಜಿಕ ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡಲು ಅವಕಾಶವಿದೆ. ಈಗಾಗಲೇ 8 ಸ್ಥಾನಗಳು ಭರ್ತಿಯಾಗಿದ್ದು, ಉಳಿದ 4 ಸ್ಥಾನಗಳನ್ನು ಇಂದು ಭರ್ತಿ ಮಾಡಲಾಗಿದೆ. 

loader