ಅದೊಂದು ಸುಂದರ ಕುಟುಂಬ. ಬದುಕಿನಲ್ಲಿ ಕನಸು ಕಟ್ಟಿಕೊಂಡಿದ್ದ ಮಕ್ಕಳು. ಗಂಡ ಹೆಂಡತಿ ನಡುವೆ ಸಾಕಷ್ಟು ಪ್ರೀತಿ ಇತ್ತು. ಆದರೆ ಅದೆನಾಯ್ತೋ ಏನೋ, ನಾಲ್ವರು ಸಾವಿನ‌ಮನೆ ಕದ ತಟ್ಟಿದ್ದಾರೆ.
ಬೆಂಗಳೂರು(ಜು.03): ಅದೊಂದು ಸುಂದರ ಕುಟುಂಬ. ಬದುಕಿನಲ್ಲಿ ಕನಸು ಕಟ್ಟಿಕೊಂಡಿದ್ದ ಮಕ್ಕಳು. ಗಂಡ ಹೆಂಡತಿ ನಡುವೆ ಸಾಕಷ್ಟು ಪ್ರೀತಿ ಇತ್ತು. ಆದರೆ ಅದೆನಾಯ್ತೋ ಏನೋ, ನಾಲ್ವರು ಸಾವಿನಮನೆ ಕದ ತಟ್ಟಿದ್ದಾರೆ.
ಸಾಲದ ಸುಳಿಗೆ ಸಿಲುಕಿದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಗಸಂದ್ರದ ತಮ್ಮ ಮನೆಯಲ್ಲಿ ಗಂಡ ,ಹೆಂಡತಿ ಸೇರಿ ಇಬ್ಬರು ಗಂಡು ಮಕ್ಕಳು ನೇಣಿಗೆ ಶರಣಾಗಿದ್ದಾರೆ. 45 ವರ್ಷದ ಜಗದೀಶ್ ಆತನ ಪತ್ನಿ 38 ವರ್ಷದ ಕಸ್ತೂರಿ, ಮಕ್ಕಳಾದ ವಿನೋದ್ ಮತ್ತು ಬಾಲಚಂದ್ರ ಮೃತ ದುರ್ದೈವಿಗಳು. ಈ ನಾಲ್ವರು ನಿನ್ನೆ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆಯಾದ್ರೂ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಸಂಬಂಧಿಕರು ಕಿಟಕಿ ಒಡೆದು ನೋಡಿದಾಗ ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣಾಗಿರುವ ಬೆಳಕಿಗೆ ಬಂದಿದೆ.
ಇನ್ನು ಮೃತ ಜಗದೀಶ್ ಮೂಲತಃ ತಮಿಳುನಾಡಿನವರು. ಸುಮಾರು ೨೦ ವರ್ಷಗಳಿಂದ ಬೆಂಗಳೂರಿನಲ್ಲೆ ನಲೆಸಿದ್ದಾರೆ. ಅಷ್ಟೇ ಅಲ್ಲದೆ ಕಷ್ಟಪಟ್ಟು ದುಡಿದು ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿದ್ದರು. ಇದರ ಜೊತೆಗೆ ವರ್ಕ್ ಶಾಪ್ ಇಟ್ಟುಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬ್ಯುಸಿನೆಸ್ ಲಾಸ್ ಆಗಿ ಸಾಲದ ಸುಳಿಗೆ ಸಿಲುಕಿದ್ರಂತೆ. ಜೊತೆಗೆ ತಮ್ಮ ಮನೆಯಲ್ಲಿ ಬೋಗ್ಯಕ್ಕೆ ಹಾಗೂ ಬಾಡಿಗೆಗೆ ಇದ್ದವರಿಗೆ ಇದೇ ತಿಂಗಳು ೭ ಲಕ್ಷ ಹಣ ನೀಡಬೇಕಿತ್ತು. ಆದ್ರೆ ಸಾಲದ ಸುಳಿಯಲ್ಲಿ ಸಿಲುಕಿದ್ದ ಜಗದೀಶ್ ಗೆ ಸಾಲದ ಹಣ ಮತ್ತು ಬೋಗ್ಯದ ಹಣ ನೀಡಲಾಗದ ಹಿನ್ನೆಲೆಯಲ್ಲಿ ನೇಣಿಗೆ ಶರಣಾಗಿರುವ ಅನುಮಾನ ವ್ಯಕ್ತವಾಗಿದೆ.
ವಿಷಯ ತಿಳಿದು ಮೃತ ಜಗದೀಶ್ ಮನೆಗೆ ಭೇಟಿ ನೀಡಿ ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿಕಿಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತಿದ್ದಾರೆ. ಅದೇನೆ ಇರಲಿ ಸಾಲಕ್ಕೆ ಹೆದರಿ ಜಗದೀಶ್, ಹೆಂಡತಿ ಜೊತೆಗೆ ಮಕ್ಕಳನ್ನು ನೇಣಿಗೆ ದೂಡಿರುವುದು ದುರಂತವೇ ಸರಿ.
