ಗಡಿ ಪಟ್ಟಣವಾಗಿರುವ ಮೋರಾ ಎಂಬ ಪಟ್ಟಣದಿಂದ 21 ಕಿಮೀ ದೂರದ ಲೋಕ್ಚಾವೋ ಎಂಬಲ್ಲಿ ಮುಖ್ಯಮಂತ್ರಿ ಒಕ್ರಂ ಇಬೊಬಿ ಸಿಂಗ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿದ್ಧತೆಯಲ್ಲಿ ತೊಡಗಿದ್ದ ಪೊಲೀಸರ ಮೇಲೆ ದಾಳಿ ನಡೆಸಲಾಗಿದೆ.

ಇಂಫಾಲ್(ಡಿ.15): ಮಣಿಪುರದ ಚಾಂಡೇಲ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಉಗ್ರ ದಾಳಿಗಳಲ್ಲಿ ನಾಲ್ವರು ಪೊಲೀಸರು ಅಸುನೀಗಿದ್ದಾರೆ.

ಗಡಿ ಪಟ್ಟಣವಾಗಿರುವ ಮೋರಾ ಎಂಬ ಪಟ್ಟಣದಿಂದ 21 ಕಿಮೀ ದೂರದ ಲೋಕ್ಚಾವೋ ಎಂಬಲ್ಲಿ ಮುಖ್ಯಮಂತ್ರಿ ಒಕ್ರಂ ಇಬೊಬಿ ಸಿಂಗ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿದ್ಧತೆಯಲ್ಲಿ ತೊಡಗಿದ್ದ ಪೊಲೀಸರ ಮೇಲೆ ದಾಳಿ ನಡೆಸಲಾಗಿದೆ. ಈ ಘಟನೆಯಲ್ಲಿ ಮೂವರು ಅಸುನೀಗಿದ್ದಾರೆ.

ಹೊಸತಾಗಿ ರಚನೆಯಾಗಿರುವ ತೆಂಗೋನುಪಾಲ್ ಜಿಲ್ಲೆಯ ಉದ್ಘಾಟನೆಗಾಗಿ ಸಿಎಂ ಆಗಮಿಸಬೇಕಾಗಿತ್ತು. ಅದೇ ಜಿಲ್ಲೆಯ ಬಾಂಗ್‌'ಯಾಂಗ್ ಎಂಬಲ್ಲಿ ಪೊಲೀಸರ ಮೇಲೆ ನಡೆದ ದಾಳಿಯಲ್ಲಿ ಒಬ್ಬ ಸಿಬ್ಬಂದಿ ಸಾವನ್ನಪ್ಪಿ, ಮತ್ತೊಬ್ಬ ಪೊಲೀಸ್ ಸಿಬ್ಬಂದಿಗೆ ಗಂಭೀರವಾಗಿ ಗಾಯಗಳಾಗಿವೆ.