ಅಲಹಾಬಾದ್[ಜೂ.19]: 2005ರಲ್ಲಿ ಅಯೋಧ್ಯೆ ಮೇಲೆ ನಡೆದ ಉಗ್ರ ದಾಳಿ ಪ್ರಕರಣದಲ್ಲಿ ನಾಲ್ವರನ್ನು ದೋಷಿ ಎಂದು ಘೋಷಿಸಿದ ಸ್ಥಳೀಯ ಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಇಷ್ಟೇ ಅಲ್ಲದೆ ಅದೋಷಿಗಳಿಗೆ ತಲಾ 2.4 ಲಕ್ಷ ರು. ದಂಡ ವಿಧಿಸಲಾಗಿದೆ. ಆದರೆ ಇನ್ನೋರ್ವ ಆರೋಪಿಯನ್ನು ಖುಲಾಸೆಗೊಳಿಸಿದೆ.

2005, ಜು.5ಕ್ಕೆ ಅಯೋಧ್ಯೆಯ ರಾಮಮಂದಿರಕ್ಕೆ ಸೇರಿದ ವಿವಾದಿತ ಸ್ಥಳದ ಸಮೀಪದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. 7 ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು. ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 5 ಜೈಷ್ ಎ ಮೊಹಮ್ಮದ್ ಉಗ್ರರನ್ನು ಹತ್ಯೆಗೈಯಲಾಗಿತ್ತು.