Asianet Suvarna News Asianet Suvarna News

400 ಜೀವ ಬಲಿಪಡೆದ ಪ್ರಬಲ ಭೂಕಂಪನ: ಸುನಾಮಿ ಹೊಡೆತಕ್ಕೆ ದ್ವೀಪವೇ ನಾಶ!

ಪ್ರಬಲ ಭೂಕಂಪನಕ್ಕೆ ನಲುಗಿದ ದ್ವೀಪ ರಾಷ್ಟ್ರ! 400 ಮಂದಿ ಬಲಿಪಡೆದ ಸಮುದ್ರದ ದೈತ್ಯ ಅಲೆಗಳು! ಇಂಡೊನೇಷ್ಯಾದ ಸುಲಾವೇಸಿ ದ್ವೀಪದ ಪಲು ನಗರ! ಇಡೀ ದ್ವೀಪವನ್ನು ಆವರಿಸಿದ ಸಮುದ್ರದ ನೀರು! ಭರದಿಂದ ಸಾಗಿರುವ ರಕ್ಷಣಾ ಕಾರ್ಯಾಚರಣೆ

384 Killed In Earth Quake and Tsunami in Indonesia
Author
Bengaluru, First Published Sep 29, 2018, 2:57 PM IST

ಪಲು(ಸೆ.29): ಇಂಡೊನೇಷ್ಯಾದ ಸುಲಾವೇಸಿ ದ್ವೀಪದ ಪಲು ನಗರದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿ ಹೊಡೆತಕ್ಕೆ ಸಿಲುಕಿ ಸುಮಾರು 384 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸುಲಾವೆಸಿ ದ್ವೀಪದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್​​ಮಾಪನದಲ್ಲಿ 7.5 ತೀವ್ರತೆ ದಾಖಲಾಗಿದೆ.

384 Killed In Earth Quake and Tsunami in Indonesia

ಭೂಕಂಪನದಿಂದ ಸಮುದ್ರ ನೀರು ದ್ವೀಪವನ್ನು ಆವರಿಸಿದ್ದು, ಸುನಾಮಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 384 ಜನ ಸಾವನ್ನಪ್ಪಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ಹೋಗಿವೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

384 Killed In Earth Quake and Tsunami in Indonesia

ಜನನಿಬಿಡ ಪ್ರದೇಶಗಳಲ್ಲಿ, ರಸ್ತೆ ಬದಿಗಳಲ್ಲಿ ಶವಗಳ ಸಾಲು ಕಂಡು ಬರುತ್ತಿದೆ. ಇನ್ನು ಭೂಕಂಪನ ವೇಳೆ ಸಮುದ್ರ ಅಲೆಗಳು 5 ಅಡಿಗಳಷ್ಟು ಎತ್ತರದವರೆಗೂ ಅಪ್ಪಳಿಸಿವೆ.

ಸುಲಾವೆಸಿ ದ್ವೀಪದಲ್ಲಿ ಮೂರುವರೆ ಲಕ್ಷ ಜನ ನೆಲೆಸಿದ್ದಾರೆ. ಬೀಚ್ ​ಫೆಸ್ಟಿವಲ್​​ಸಂಭ್ರಮದಲ್ಲಿದ್ದ ನಾಗರಿಕರು ಸಾವಿನ ಮನೆ ಸೇರಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

7.5ರ ತೀವ್ರತೆಯಲ್ಲಿ ಭಾರೀ ಭೂಕಂಪ, ಸುನಾಮಿ

Follow Us:
Download App:
  • android
  • ios