ಪಬ್‌ನಲ್ಲಿ ಅಶ್ಲೀಲ ನೃತ್ಯಕ್ಕೆ ಒತ್ತಾರ32 ಯುವತಿಯರನ್ನು ರಕ್ಷಿಸಿದ ಪೊಲೀಸರುಅಶ್ಲೀಲ ನೃತ್ಯಕ್ಕೆ ಒತ್ತಾಯಿಸಿದ 6 ಮಂದಿ ಬಂಧನ 

ಬೆಂಗಳೂರು(ಜು.5): ಯುವತಿಯರಿಂದ ಬಲವಂತವಾಗಿ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ ಪಬ್ ವೊಂದರ ಮೇಲೆ ದಾಳಿ ಮಾಡಿರುವ ಪೊಲೀಸರು, 32 ಯುವತಿಯರನ್ನು ರಕ್ಷಿಸಿ 6 ಮಂದಿಯನ್ನು ಬಂಧಿಸಿದ್ದಾರೆ.

ಡಿಸಿಪಿ ಅಜಯ್‌ ಹಿಲೋರಿ ಅವರ ಸೂಚನೆ ಮೇರೆಗೆ ಮಂಗಳವಾರ ತಡರಾತ್ರಿಯಲ್ಲಿ ಪಬ್‌ ಮೇಲೆ ದಾಳಿ ನಡೆಸಿದ ಪೊಲೀಸರು, ಅಶ್ಲೀಲ ನೃತ್ಯದಲ್ಲಿ ತೊಡಗಿದ್ದ ಉತ್ತರ ಭಾರತ ಮೂಲದ ಯುವತಿಯರನ್ನು ರಕ್ಷಿಸಿದ್ದಾರೆ. ಅಲ್ಲದೇ ಇವರಿಂದ ಬಲವಂತವಾಗಿ ನೃತ್ಯ ಮಾಡಿಸುತ್ತಿದ್ದ ಆರೋಪದ ಮೇರೆಗೆ ಮ್ಯಾನೇಜರ್‌ ಸೇರಿ ಆರು ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ಲೇಡಿಸ್‌ ಬಾರ್‌ ಹೆಸರಿನಲ್ಲಿ ಪಬ್‌ ಲೈಸೆನ್ಸ್‌ ಪಡೆದು ಅನಧಿಕೃತವಾಗಿ ಲೈವ್‌ಬ್ಯಾಂಡ್‌ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಜೆಬಿ ನಗರ ಠಾಣೆ ಪೊಲೀಸರಿಗೆ ಸೂಚನೆ ಸಿಕ್ಕಿತ್ತು. ಮಹಿಳಾ ಸಿಬ್ಬಂದಿ ಜತೆ ದಾಳಿ ನಡೆಸಿದ ಪೊಲೀಸರು, ಅಶ್ಲೀಲವಾಗಿ ಉಡುಪು ಧರಿಸಿ ನೃತ್ಯದಲ್ಲಿ ತೊಡಗಿದ್ದ ಬಿಹಾರ, ಗುಜರಾತ್‌, ಮಹಾರಾಷ್ಟ್ರ ಮೂಲದ 32 ಯುವತಿಯರನ್ನು ರಕ್ಷಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.