ಡಿ.19ರಂದು ಎಲೆಕ್ಟೋರಲ್‌ ಕಾಲೇಜಿನ ಮತದಾರರು ಮತ ಹಾಕಲಿದ್ದಾರೆ. ಜನಪ್ರಿಯ ಮತಗಳಂತೆ ಟ್ರಂಪ್‌ಗೆ ಅವರು ಮತಹಾಕಿದರೆ ನಿಯೋಜಿತ ಅಧ್ಯಕ್ಷರು ಅಧಿಕೃತವಾಗಿ ಅಧ್ಯಕ್ಷ ಸ್ಥಾನ ಗೆಲ್ಲಲಿದ್ದಾರೆ.

ಪೋರ್ಟ್’ಲ್ಯಾಂಡ್ (ನ.13): ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಯ್ಕೆ ರದ್ದುಗೊಳಿಸಿ ಡೆಮಾಕ್ರಾಟ್‌ ಪಕ್ಷದ ಹಿಲರಿ ಕ್ಲಿಂಟನ್‌ರನ್ನು ಆಯ್ಕೆ ಮಾಡುವಂತೆ 32 ಲಕ್ಷ ಮಂದಿ ಸಹಿ ಮಾಡಿ ಅಮೆರಿಕದ ಎಲೆಕ್ಟೋರಲ್‌ ಕಾಲೇಜಿಗೆ ಸಲ್ಲಿಕೆಯಾಗಿದೆ. ಇದೇ ವೇಳೆ ಡಿ.19ರಂದು ಎಲೆಕ್ಟೋರಲ್‌ ಕಾಲೇಜಿನ ಮತದಾರರು ಮತ ಹಾಕಲಿದ್ದಾರೆ. ಜನಪ್ರಿಯ ಮತಗಳಂತೆ ಟ್ರಂಪ್‌ಗೆ ಅವರು ಮತಹಾಕಿದರೆ ನಿಯೋಜಿತ ಅಧ್ಯಕ್ಷರು ಅಧಿಕೃತವಾಗಿ ಅಧ್ಯಕ್ಷ ಸ್ಥಾನ ಗೆಲ್ಲಲಿದ್ದಾರೆ. ಆದರೆ, ವಿವಿಧ ಪ್ರಾಂತ್ಯಗಳಲ್ಲಿನ ಜನಪ್ರಿಯ ಮತದಾರರ ನೀಡಿದ್ದ ತೀರ್ಪಿನ ವಿರುದ್ಧವಾಗಿಯೇ ಎಲೆಕ್ಟೋರಲ್‌ ಕಾಲೇಜಿನ ಮತದಾರರು ಮತಹಾಕಿದ್ದಾರೆ.

ವ್ಯಕ್ತಿಗೆ ಗುಂಡು: ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಮೂರನೇ ದಿನಕ್ಕೆ ಕಾಲಿಟ್ಟಿದೆ. ಪೋರ್ಟ್‌ಲ್ಯಾಂಡ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದ್ದಾರೆ. ಇದೇ ವೇಳೆ ಒರೆಗಾನ್‌ನನಲ್ಲಿ ಪ್ರತಿಭಟನಾಕಾರರ ವಿರುದ್ಧ ಆಕ್ಷೇಪಿಸಿದ ವ್ಯಕ್ತಿಗೆ ಗುಂಡು ಹಾರಿಸಲಾಗಿದೆ. ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ಹಾರಿಸಿದಾತನಿಗೆ ಶೋಧ ನಡೆಸಲಾಗುತ್ತಿದೆ.

ಸಂಬಳ ಬೇಡ: ತಮಗೆ ಅಧ್ಯಕ್ಷೀಯ ಸಂಬಳ ಬೇಡ ಎಂದು ನಿಯೋಜಿತ ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿಕೊಂಡಿದ್ದಾರೆ. ಹೀಗಾಗಿ, ಅವರಿಗೆ ಸಿಗುವ 4 ಲಕ್ಷ ಅಮೆರಿಕನ್‌ ಡಾಲರ್‌ಗೆ ಏನಾಗಲಿದೆ. ಈ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ ಎಂದು ‘ಸಿಬಿಎಸ್‌ ನ್ಯೂಸ್‌' ವರದಿ ಮಾಡಿದೆ. 2015ರ ಸೆ.17ರಂದು ಹ್ಯಾಂಪ್‌ಶೈರ್‌ನ ರೋಚ್‌ಸ್ಟರ್‌ನಲ್ಲಿ ಡೊನಾಲ್ಡ್‌ ಟ್ರಂಪ್‌, ‘‘ನಾನು ಅಧ್ಯಕ್ಷರಾಗಿ ಆಯ್ಕೆಯಾದರೆ ವೇತನ ಪಡೆಯುವುದಿಲ್ಲ. ಅದು ನನಗೆ ದೊಡ್ಡ ವಿಚಾರವಲ್ಲ,'' ಎಂದು ಹೇಳಿದ್ದನ್ನು ಶುಕ್ರವಾರ ಪುನರುಚ್ಚರಿಸಿದ್ದಾರೆ.