ಕಂದಕಕ್ಕೆ ಉರುಳಿ ಬಿದ್ದ ಬಸ್ : 30 ಮಂದಿ ದುರ್ಮರಣ

30 feared dead as bus falls into gorge
Highlights

ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಬಸ್ ವೊಂದು 60 ಅಡಿಯ ಭಾರೀ  ಕಂದಕಕ್ಕೆ ಉರುಳಿ  ಬಿದ್ದು 30 ಮಂದಿ ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾರೆ.  

ನವದೆಹಲಿ :  ಮಿನಿ ಬಸ್ ವೊಂದು ಸುಮಾರು 60 ಅಡಿ ಆಳದ ಭಾರೀ  ಕಂದಕಕ್ಕೆ ಉರುಳಿ ಬಿದ್ದು 30 ಮಂದಿ ದುರ್ಮರಣವನ್ನಪ್ಪಿದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.  

ಉತ್ತರಾಖಂಡದ ಪಿಪಲಿ - ಬೋನ್ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.  ರಾಮನಗರದಿಂದ ಬೋನ್ ಪ್ರದೇಶದಲ್ಲಿ ತೆರಳುತ್ತಿದ್ದ  ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ.  ಈ ವೇಳೆ 30 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. 

ಸ್ಥಳಕ್ಕೆ ಎನ್ ಡಿ ಆರ್ ಎಫ್ ಪಡೆ ಆಗಮಿಸಿದ್ದು, ಕಾರ್ಯಾಚಾರಣೆಯಲ್ಲಿ ತೊಡಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.  ಉತ್ತರಾಖಂಡ್ ಮುಖ್ಯಮಂತ್ರಿ  ತ್ರಿವೇಂದ್ರ ಸಿಂಗ್ ರಾವತ್ ಈ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ. 

loader