ಭೋಪಾಲ್ :  ಮಧ್ಯ ಪ್ರದೇಶ ಕಾಂಗ್ರೆಸ್  ಮುಖಂಡ  ಕಮಲ್ ನಾಥ್ ಇದೀಗ ಯೂ ಟರ್ನ್ ಹೊಡೆದಿದ್ದಾರೆ. 30 ಬಿಜೆಪಿ ಮುಖಂಡರು ಎಂಎಲ್ ಎ ಚುನಾವಣೆಗೆ ಕಾಂಗ್ರೆಸ್ ನಿಂದ ಟಿಕೆಟ್ ಪಡೆದುಕೊಳ್ಳಲು ಲಾಬಿ ನಡೆಸುತ್ತಿದ್ದಾರೆ ಎನ್ನುವ ಹೇಳಿಕೆ ನೀಡಿದ್ದರು. 

ಆದರೆ ಇದೀಗ 30 ಬಿಜೆಪಿ ಶಾಸಕರು ಕೇವಲ ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಆದರೆ ಲಾಬಿ ನಡೆಸುತ್ತಿದ್ದಾರೆ ಎಂದು ತಾವು ಹೇಳಲಿಲ್ಲ. ಕೇವಲ ತಮ್ಮ ಜೊತೆ ಅವರೆಲ್ಲಾ ಸಂಪರ್ಕದಲ್ಲಿ ಇದ್ದಾರೆ.  ಅವರೆಲ್ಲಾ ಯಾಕೆ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ತಾವು ಹೇಳಲಿಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ. 

ಅಲ್ಲದೇ ಮಧ್ಯ ಪ್ರದೇಶದಲ್ಲಿ ಇದೇ ವರ್ಷ ಚುನಾವಣೆ ನಡೆಯಲಿದ್ದು, ಈಗಾಗಲೇ 2000ಮಂದಿ ಕಾಂಗ್ರೆಸ್ ನಿಂದ  ಚುನಾವಣಾ ಟಿಕೆಟ್ ಅರ್ಜಿ ಸಲ್ಲಿಸಿದ್ದಾರೆ. 

ಸೆಪ್ಟೆಂಬರ್ 2ರಂದು ಮುಖ್ಯಮಂತ್ರಿ  ಶಿವರಾಜ್ ಸಿಂಗ್ ಚೌಹಾಣ್  ಅವರನ್ನೂ  ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಲು ಆಹ್ವಾನಿಸಿದ್ದರು. ಇದೀಗ ತಮ್ಮ ಸಂಪರ್ಕದಲ್ಲಿ 30 ಬಿಜೆಪಿ ಶಾಸಕರಿದ್ದಾರೆ ಎನ್ನುವ ಮೂಲಕ ರಾಜಕೀಯದಲ್ಲಿ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.