ಗಡಿಯಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಸೆಕ್ಟರ್​'ನಲ್ಲಿ ಉಗ್ರರು ಏಕಾಏಕಿ ಪೊಲೀಸ್ ಠಾಣೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಯೋಧರೂ ಕೂಡ ಫೈರಿಂಗ್ ನಡೆಸಿದ್ದಾರೆ. ​

ನವದೆಹಲಿ(ಆ.25): ಗಡಿಯಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಸೆಕ್ಟರ್​'ನಲ್ಲಿ ಉಗ್ರರು ಏಕಾಏಕಿ ಪೊಲೀಸ್ ಠಾಣೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಯೋಧರೂ ಕೂಡ ಫೈರಿಂಗ್ ನಡೆಸಿದ್ದಾರೆ. ​

ಇಂದು ಮುಂಜಾನೆ ಗಡಿಯೊಳಗೆ ನುಗ್ಗಿದ ಭಯೋತ್ಪಾದಕರು ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ಗ್ರೆನೇಡ್​ ದಾಳಿ ನಡೆಸಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಓರ್ವ ಪೊಲೀಸ್ ಪೇದೆ ಹುತಾತ್ಮರಾಗಿದ್ದಾರೆ. ಇಬ್ಬರು ಸಿಆರ್​'ಪಿಎಫ್ ಯೋಧರು ಹಾಗೂ ಇಬ್ಬರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ.

ಕಟ್ಟಡದೊಳಗೆ ಉಗ್ರರು ಅಡಗಿದ್ದು ಕಟ್ಟಡ ಸುತ್ತ ಸಿಆರ್​ಪಿಎಫ್​ ಹಾಗೂ ಪೊಲೀಸರು ಸುತ್ತುವರೆದಿದ್ದಾರೆ.