ಬೆಂಗಳೂರು [ಆ.24]:  ನೂತನ ಸಚಿವರಿಗೆ ಕೊಠಡಿಯನ್ನು ಹಂಚಿಕೆ ಮಾಡಿದ ಬೆನ್ನಲ್ಲೇ ಮೂವರು ಸಚಿವರು ಕೊಠಡಿ ಬದಲಾವಣೆಗೆ ಮನವಿ ಮಾಡಿಕೊಂಡಿದ್ದಾರೆ.

ಶ್ರೀರಾಮುಲು, ಕೆ.ಎಸ್‌.ಈಶ್ವರಪ್ಪ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರು ತಮಗೆ ನೀಡಿರುವ ಕೊಠಡಿಯನ್ನು ಬದಲಾವಣೆ ಮಾಡಿಕೊಡುವಂತೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಶ್ರೀರಾಮುಲು ಅವರಿಗೆ ವಿಧಾನಸೌಧದಲ್ಲಿನ 328 ಸಂಖ್ಯೆಯ ಕೊಠಡಿ ನೀಡಲಾಗಿದೆ. ಆದರೆ, ಅವರು ವಿಕಾಸಸೌಧದಲ್ಲಿನ ಕೊಠಡಿ ನೀಡುವಂತೆ ಮನವಿ ಮಾಡಿದ್ದಾರೆ. ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪ ಅವರಿಗೆ 329 ಸಂಖ್ಯೆಯ ಕೊಠಡಿ ನೀಡಲಾಗಿದ್ದು, ವಿ.ಸೋಮಣ್ಣ ಅವರಿಗೆ ನೀಡಿರುವ 314 ಕೊಠಡಿಯನ್ನು ನೀಡುವಂತೆ ಕೋರಿದ್ದಾರೆ. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೋಟ ಶ್ರೀನಿವಾಸ ಪೂಜಾರಿ ಅವರಿಗೆ 336 ಸಂಖ್ಯೆಯ ಕೊಠಡಿ ನೀಡಲಾಗಿದ್ದು, ಅದು ಚಿಕ್ಕದಾಗಿದೆ. ಹೀಗಾಗಿ ಬೇರೆ ಕೊಠಡಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.