Asianet Suvarna News Asianet Suvarna News

ಅರ್ಥವಾಗದಂತೆ ಬರೆದ 3 ವೈದ್ಯರಿಗೆ 5000 ದಂಡ

ವೈದ್ಯರು ಬರೆಯೋ ಔಷಧಿ ಟೀಟಿ ಅವರಿಗೆ ಬಿಟ್ಟರೆ ಬೇರೆ ಯಾರಿಗೂ ಅರ್ಥವಾಗುವಂತೆ ಇರೋಲ್ಲ. ಅವರಿಗೂ ಅರ್ಥವಾಗದಂತಿದ್ದರೆ? ಈ ಕಾರಣಕ್ಕೇ ಮೂವರು ಡಾಕ್ಟರಿಗೆ ದಂಡ ವಿಧಿಸಲಾಗಿದೆ.

3 doctors penalized 5000 each for writing prescription in poor handwriting
Author
Bengaluru, First Published Oct 5, 2018, 9:09 AM IST

ಲಖನೌ: ರೋಗಿಗಳಿಗೆ ವೈದ್ಯರು ಬರೆದುಕೊಡುವ ಔಷಧ ಚೀಟಿ, ಮೆಡಿಕಲ್‌ ಶಾಪ್‌ನವರಿಗೆ ಬಿಟ್ಟರೆ ಬೇರಾರಿಗೂ ಅರ್ಥವಾಗುವುದು ಬಹಳ ಕಷ್ಟ. ಇಂಥದ್ದೇ ಅರ್ಥವಾಗದ ರೀತಿಯಲ್ಲಿ ವೈದ್ಯಕೀಯ ವರದಿಯೊಂದನ್ನು ಬರೆದುಕೊಟ್ಟಿದ್ದ ಮೂವರು ವೈದ್ಯರಿಗೆ ಅಲಹಾಬಾದ್‌ ಹೈಕೋರ್ಟ್‌ ತಲಾ 5000 ರು. ದಂಡ ವಿಧಿಸಿದೆ.

ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಮೂವರ ಬಗ್ಗೆ ವೈದ್ಯರು, ಗಾಯದ ಬಗ್ಗೆ ವರದಿ ಕೊಟ್ಟಿದ್ದರು. ಆದರೆ ಈ ವರದಿ ಓದಲು ಬರದ ಸ್ಥಿತಿಯಲ್ಲಿಲತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಇದು ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸುವ ಪ್ರಕರಣವೆಂದು ಪರಿಗಣಿಸಿ ಮೂವರು ವೈದ್ಯರಿಗೆ ಸಮನ್ಸ್‌ ನೀಡಿದೆ.

ಅಲ್ಲದೆ, ಅವರಿಗೆ ತಲಾ 5000 ರು. ದಂಡ ವಿಧಿಸಿ ಆದೇಶಿಸಿದೆ. ಇದರ ಜೊತೆಗೆ, ಮುಂದಿನ ದಿನಗಳಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವೈದ್ಯರು ರೋಗಿಗಳಿಗೆ ವೈದ್ಯಕೀಯ ವಿವರವನ್ನು ಬರೆದುಕೊಡುವಂತೆ ನೋಡಿಕೊಳ್ಳಬೇಕೆಂದು ರಾಜ್ಯದ ಗೃಹ ಸಚಿವಾಲಯ, ವೈದ್ಯಕೀಯ ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದೆ.

Follow Us:
Download App:
  • android
  • ios