ಬೇರೆ ಯಾತ್ರಿಕರಿಗೆ ಹೋಲಿಸಿದರೆ ಹೀಗೆ ನಡೆದುಬರುವ ಯಾತ್ರಿಕರಿಗೆ ಬೇಗ ದರ್ಶನ ನೀಡಲಾಗುತ್ತದೆ. ಜೊತೆಗೆ ಒಂದು ಲಡ್ಡು ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ದಿವ್ಯದರ್ಶನ ಎನ್ನುತ್ತಾರೆ
ತಿರುಪತಿ(ಜೂ.30): ನಡಿಗೆಯಲ್ಲಿ ಬಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಾರಾಂತ್ಯದ ಕಡೆಯ ಮೂರು ದಿನಗಳಲ್ಲಿ ದಿವ್ಯದರ್ಶನ ಸೇವೆ ನಿಲ್ಲಿಸಲು ಟಿಟಿಡಿ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಜುಲೈ 7,8 ಮತ್ತು 9ರಂದು ಈ ಯೋಜನೆ ಜಾರಿಗೊಳ್ಳಲಿದೆ. ಹರಕೆ ತೀರಿಸುವ ಸಲುವಾಗಿ ನಿತ್ಯ 40ರಿಂದ 50000 ಜನ ನಡೆದುಕೊಂಡೇ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಬೇರೆ ಯಾತ್ರಿಕರಿಗೆ ಹೋಲಿಸಿದರೆ ಹೀಗೆ ನಡೆದುಬರುವ ಯಾತ್ರಿಕರಿಗೆ ಬೇಗ ದರ್ಶನ ನೀಡಲಾಗುತ್ತದೆ. ಜೊತೆಗೆ ಒಂದು ಲಡ್ಡು ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ದಿವ್ಯದರ್ಶನ ಎನ್ನುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದಿವ್ಯದರ್ಶನಕ್ಕೆ ಬರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಅವರಿಗೆ ಕಡಿವಾಣ ಹಾಕಲು ಟಿಟಿಡಿ ಮುಂದಾಗಿದೆ. ಇದಕ್ಕಾಗಿ ಪ್ರಾಯೋಗಿಕವಾಗಿ ಜುಲೈ 7,8,9ರಂದು ನಡೆದು ಬರುವವರು ಬೆಟ್ಟದ ಮೇಲೆ ಏರಿದ ಬಳಿಕ ಸಾಮಾನ್ಯ ದರ್ಶನದ ಸಾಲಿನಲ್ಲೇ ನಿಂತು ದರ್ಶನ ಪಡೆಯಬೇಕಾಗುತ್ತದೆ. ಟಿಟಿಡಿಯ ಈ ಹೊಸ ನಿಯಮಕ್ಕೆ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
