2003ರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಉಮಾ ಭಾರತಿ ಆಯ್ಕೆಯಾದಾಗಲೂ ತೆರೆಯ ಹಿಂದೆ ಕಾರ್ಯನಿರ್ವಹಿಸಿದ್ದರು. 2014ರ ಮಹಾರಾಷ್ಟ್ರ ಚುನಾವಣೆಯಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಲಖನೌ(ಮಾ.12): ಉತ್ತರಪ್ರದೇಶದಲ್ಲಿ ಬಿಜೆಪಿ ಐತಿಹಾಸಿಕ ಗಳಿಸಿದ್ದರ ಶ್ರೇಯಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಅರ್ಪಿಸಲಾಗುತ್ತಿದೆ. ಆದರೆ ಈ ಜಯಭೇರಿ ಹಿಂದೆ ಮೂವರು ಬ್ರಹ್ಮಚಾರಿಗಳ ಮಹತ್ವದ ಪಾತ್ರವೂ ಅಡಗಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾದ ಶಿವ ಪ್ರಕಾಶ್, ಸುನೀಲ್ ಬನ್ಸಲ್ ಹಾಗೂ ಮಾಜಿ ಪ್ರಚಾರಕ ಓಂ ಮಾಥೂರ್ ಅವರೇ ತೆರೆಯ ಹಿಂದಿನ ಸಾಧಕರು. 2014ರಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬಳಿಕ ಆರ್‌ಎಸ್‌ಎಸ್ ಶಿವ ಪ್ರಕಾಶ್ ಅವರನ್ನು ಬಿಜೆಪಿಗೆ ಕಳುಹಿಸಿಕೊಟ್ಟಿತ್ತು. ಅಂದಿನಿಂದ ಅವರು ಪಶ್ಚಿಮ ಬಂಗಾಳ, ಉತ್ತರಪ್ರದೇಶ ಹಾಗೂ ಉತ್ತರಾಖಂಡದ ಜವಾಬ್ದಾರಿ ಹೊತ್ತುಕೊಂಡಿದ್ದರು.

ಮತ್ತೊಂದೆಡೆ ಬನ್ಸಲ್ ಅವರು ಉತ್ತರಪ್ರದೇಶದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಅಮಿತ್ ಶಾ ಅವರೇ ‘ಉತ್ತರಪ್ರದೇಶದಲ್ಲಿ ಪಕ್ಷದ ಹೀರೋ ಇವರೇ’ ಎಂದು ಪ್ರಚಾರದ ವೇಳೆ ನಾಯಕರಿಗೆ ತಿಳಿಸಿದ್ದರು. ಓಂ ಮಾಥೂರ್ ಅವರು 2007, 2012ರ ಗುಜರಾತ್ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2003ರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಉಮಾ ಭಾರತಿ ಆಯ್ಕೆಯಾದಾಗಲೂ ತೆರೆಯ ಹಿಂದೆ ಕಾರ್ಯನಿರ್ವಹಿಸಿದ್ದರು. 2014ರ ಮಹಾರಾಷ್ಟ್ರ ಚುನಾವಣೆಯಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು.