ಮಾಜಿ ವಿಶ್ವ ಸುಂದರಿ ನನ್ನ ತಾಯಿ, ನಾನು ಐಶ್ವರ್ಯ ರೈ ಮಗ ಅಂತಾ, 27 ವರ್ಷದ ಯುವಕನೊಬ್ಬ ಹೊಸ ವಿವಾದ ಹುಟ್ಟುಹಾಕಿದ್ದಾನೆ.

ಮಂಗಳೂರು (ಡಿ.30): ಮಾಜಿ ವಿಶ್ವ ಸುಂದರಿ ನನ್ನ ತಾಯಿ, ನಾನು ಐಶ್ವರ್ಯ ರೈ ಮಗ ಅಂತಾ, 27 ವರ್ಷದ ಯುವಕನೊಬ್ಬ ಹೊಸ ವಿವಾದ ಹುಟ್ಟುಹಾಕಿದ್ದಾನೆ. ವಿಶಾಖಪಟ್ಟಣ ಮೂಲದ ಸಂಗೀತ್ ಕುಮಾರ್ ಎಂಬಾತ ಮಂಗಳೂರಿಗೆ ಆಗಮಿಸಿದ್ದು, ನಾನು ಐಶ್ವರ್ಯ ರೈ ಮಗ, ನನಗೆ ಅವರ ಕುಟುಂಬಸ್ಥರು ಗೊತ್ತು ಎಂದಿದ್ದಾನೆ.

ತನ್ನ ತಂದೆ ವಿಶಾಖಪಟ್ಟಣ ಮೂಲದ ಮವುಲು ಆದಿರೆಡ್ಡಿ. 27 ವರ್ಷಗಳ ಹಿಂದೆ ಐಶ್ವರ್ಯಾ ರೈ ನೆರವಿನಿಂದ ಟೆಸ್ಟ್ ಟ್ಯೂಬ್ ಮೂಲಕ ಅವರು ಮಗು ಪಡೆದಿದ್ದರು. ನಾನು ಹುಟ್ಟಿದ 2 ವರ್ಷ ಲಂಡನ್ ನಲ್ಲಿ ಐಶ್ವರ್ಯಾ ಕುಟುಂಬದ ಜೊತೆಗೆ ವಾಸಿಸುತ್ತಿದ್ದೆ. ಅನಂತರ ನನ್ನ ತಂದೆ ನನ್ನನ್ನು ಆಂಧ್ರಪ್ರದೇಶಕ್ಕೆ ತಂದು ಸಾಕಿದ್ದಾರೆ ಎಂದಿದ್ದಾನೆ.

ಆದರೆ ಸಂಗೀತ್ ಕುಮಾರ್ ಬಳಿ ತಾನೂ ಐಶ್ವರ್ಯ ಪುತ್ರನೆಂದು ಹೇಳಿಕೊಳ್ಳಲು ಯಾವುದೇ ದಾಖಲೆಗಳಿಲ್ಲ. ಆದ್ರೆ ‘ಐಶ್ವರ್ಯಾ ಕುಟುಂಬಸ್ಥರು ನನ್ನನ್ನು ನೋಡಿದರೆ ಒಪ್ಪಿಕೊಳ್ಳುತ್ತಾರೆ. ತಾನು ನನ್ನ ತಾಯಿ ಬಳಿ ಹೋಗಬೇಕು’ಎನ್ನುತ್ತಿದ್ದಾನೆ. ಈತ ಸೌಂಡ್ ಇಂಜಿನಿಯರ್ ಆಗಿದ್ದು, ತುಳು ಚಿತ್ರವೊಂದರ ಶೂಟಿಂಗ್ ಗೆ ಮಂಗಳೂರಿಗೆ ಆಗಮಿಸಿದ್ದಾರೆ. ಇನ್ನು ಈತನ ಹೇಳಿಕೆಯಿಂದ ಬಚ್ಚನ್ ಫ್ಯಾಮಿಲಿ ಕಂಗಾಲಾಗಿದೆ.