ಉದ್ಯೋಗಕ್ಕೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದ ತೆಲಾಂಗಣ ರಾಜ್ಯದ 29 ಕಾರ್ಮಿಕರನ್ನು ಕಂಪನಿಯೊಂದು ಅಕ್ರಮವಾಗಿ ಸೆರೆಯಲ್ಲಿಟ್ಟಿತ್ತು. ಈ ಕುರಿತು ತೆಲಾಂಗಣ ಸಚಿವ ಕೆ.ಟಿ.ರಾಮರಾವ್ ಸುಷ್ಮಾಗೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು

ನವದೆಹಲಿ (ಮಾ.31): ಕಂಪನಿಯೊಂದರ ಅಕ್ರಮ ಬಂಧನದಲ್ಲಿದ್ದ 29 ಮಂದಿ ಕಾರ್ಮಿಕರನ್ನು ಬಿಡುಗಡೆಮಾಡಿ ವಾಪಾಸು ಭಾರತಕ್ಕೆ ಬರುವ ವ್ಯವಸ್ಥೆ ಮಾಡಲಾಗಿದೆ ಎಂದು ವಿದೇಶಾಂಗ ಖಾತೆ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಉದ್ಯೋಗಕ್ಕೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದ ತೆಲಾಂಗಣ ರಾಜ್ಯದ 29 ಕಾರ್ಮಿಕರನ್ನು ಕಂಪನಿಯೊಂದು ಅಕ್ರಮವಾಗಿ ಸೆರೆಯಲ್ಲಿಟ್ಟಿತ್ತು. ಈ ಕುರಿತು ತೆಲಾಂಗಣ ಸಚಿವ ಕೆ.ಟಿ.ರಾಮರಾವ್ ಸುಷ್ಮಾಗೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು.

Scroll to load tweet…

ನಾವು ಎಲ್ಲಾ 29 ಕಾರ್ಮಿಕರನ್ನು ರಕ್ಷಿಸಿದ್ದೇವೆ. ದೇಶಕ್ಕೆ ವಾಪಾಸು ಬರುವ ಖರ್ಚನ್ನೂ ಕೂಡಾ ನಾವು ಭರಿಸಲಿದ್ದೇವೆ ಎಂದು ಸುಷ್ಮಾ ಟ್ವೀಟಿಸಿದ್ದಾರೆ.