ಭಾರತೀಯನಿಗೆ ಲಾಟರಿಯಲ್ಲಿ ಒಲಿಯಿತು 10 ಲಕ್ಷ ಅಮೆರಿಕನ್ ಡಾಲರ್

First Published 27, Mar 2018, 9:34 PM IST
25 year old Indian wins USD 1 million in lottery in Dubai
Highlights

ಕಳೆದ ಒಂದೂವರೆ ವರ್ಷದಿಂದ ದುಬೈನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾನೆ. ಬಹುಮಾನದ ಮೊತ್ತ ಸರಿ ಸುಮಾರು ಭಾರತೀಯ ರೂಗಳಲ್ಲಿ 15 ಕೋಟಿ ರೂ. ಗಳಷ್ಟಲಾಗಲಿದೆ.

ದುಬೈ(ಮಾ.27): ದುಬೈನಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಲಾಟರಿಯಲ್ಲಿ 10 ಲಕ್ಷ ರೂ. ಅಮೆರಿಕನ್ ಡಾಲರ್ ಗೆದ್ದಿದ್ದಾನೆ.

ದಾನೀಶ್ ಕೋತರಂಬನ್ (25) ಬಹುಮಾನ ಗೆದ್ದ ಭಾರತೀಯ. ಈತ ಜೋರ್ಡಾನ್ ಪ್ರಜೆಯೊಂದಿಗೆ ದುಬೈ ಡ್ಯೂಟಿ ಫ್ರೀ ಮಿಲೇನಿಯಮ್ ಮಿಲೇನಿಯರ್ ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿದ್ದಾನೆ.

ಕಳೆದ ಒಂದೂವರೆ ವರ್ಷದಿಂದ ದುಬೈನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾನೆ. ಬಹುಮಾನದ ಮೊತ್ತ ಸರಿ ಸುಮಾರು ಭಾರತೀಯ ರೂಗಳಲ್ಲಿ 15 ಕೋಟಿ ರೂ. ಗಳಷ್ಟಲಾಗಲಿದೆ. ಕಳೆದ ಅಕ್ಟೋಬರ್'ನಲ್ಲಿ ಅಬುದಾಬಿಯಲ್ಲಿ ಭಾರತೀಯ ಮೂಲದ 10 ಮಂದಿ 1 ಮಿಲಿಯನ್ ಹಾಗೂ ಆಗಸ್ಟ್'ನಲ್ಲಿ  ಯುಎಇ'ನಲ್ಲಿ ಓರ್ವ 1.3 ಮಿಲಿಯನ್ ಬಹುಮಾನ ಗೆದ್ದಿದ್ದ.

loader