ಕುರುಕ್ಷೇತ್ರದ ಮಥಾನ ಗ್ರಾಮದಲ್ಲಿರುವ ಸರ್ಕಾರಿ ಗೋಶಾಲೆಯಲ್ಲಿ ಮಳೆ ಹಾಗೂ ಮೇವಿನ ಕೊರತೆಯಿಂದ 25 ಗೋವುಗಳು ಮೃತಪಟ್ಟಿವೆ.
ಕುರುಕ್ಷೇತ್ರ, ಹರ್ಯಾಣ (ಜು. 07): ಕುರುಕ್ಷೇತ್ರದ ಮಥಾನ ಗ್ರಾಮದಲ್ಲಿರುವ ಸರ್ಕಾರಿ ಗೋಶಾಲೆಯಲ್ಲಿ ಮಳೆ ಹಾಗೂ ಮೇವಿನ ಕೊರತೆಯಿಂದ 25 ಗೋವುಗಳು ಮೃತಪಟ್ಟಿವೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಗೋಶಾಲೆಯಲ್ಲಿ ನೀರು ನಿಂತಿರುವುದರಿಂದ ಕೆಲವು ಗೋವುಗಳು ಸಾವನಪ್ಪಿದರೆ, ಇನ್ನು ಕೆಲವು ಗೋವುಗಳು ಮೇವಿನ ಕೊರತೆಯಿಂದ ಸತ್ತಿವೆ ಎಂದು ಹೇಳಲಾಗಿದೆ. ಇನ್ನೂ ಬಹಳಷ್ಟು ಗೋವುಗಳು ಕಾಯಿಲೆಗೊಳಗಾಗಿವೆ ಎಂದು ಗ್ರಾಮದ ಉಖ್ಯಸ್ಥ ಕಿರಣ್ ಬಾಲಾ ಹೇಳಿದ್ದಾರೆ.
ಹರ್ಯಾಣ ಗೋ ಸೇವಾ ಆಯೋಗದ ಅಧ್ಯಕ್ಷ ಭಾನಿ ದಾಸ್ ಮಾಂಗ್ಲಾ ಹಾಗೂ ಅಧಿಕಾರಿಗಳು ಗೋಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಯಿಲೆಪೀಡಿತ ಗೋವುಗಳನ್ನು ಕರ್ನಾಲ್’ನಲ್ಲಿರುವ ಗೋಶಾಲೆಗೆ ಸ್ಥಳಾಂತರಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಗೋಶಾಲೆಯಲ್ಲಿ ಇನ್ನೂ 600 ಗೋವುಗಳಿದ್ದು ಸರಿಯಾದ ವ್ಯವಸ್ಥೆಗಳಿಲ್ಲ. ಷ್ಟೋಓ ಗೋವುಗಳಿಗೆ ಕುಡಿಯುವ ನೀರಾಗಲಿ, ಮೇವಾಗಲಿ ಇಲ್ಲವೆಂದು ಗೋಶಾಲೆಗೆ ಮೇವು ಪೂರೈಸುವ ಶ್ರೀ ಕೃಷನ್ ಗೋಶಾಲೆಯ ಮಾಜಿ ಅಧ್ಯಕ್ಷ ಅಶೋಕ್ ಪಾಪ್ನೆಜಾ ಹೇಳಿದ್ದಾರೆ.
