ಜಬಲ್ಪುರ- ಮಹಾಕೌಶಲ್ ಎಕ್ಸ್'ಪ್ರೆಸ್'ನ 8 ಬೋಗಿಗಳು ಇಂದು ಬೆಳಗ್ಗೆ ಹಳಿ ತಪ್ಪಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಲಕ್ನೋ (ಮಾ.30): ಉತ್ತರ ಪ್ರದೇಶದ ಕುಲಪಹಾರ್ ಬಳಿ ದೆಹಲಿಗೆ ತೆರಳುತ್ತಿದ್ದ ಎಕ್ಸ್'ಪ್ರೆಸ್ ರೈಲು ಹಳಿ ತಪ್ಪಿ 22 ಮಂದಿ ಗಾಯಗೊಂಡಿದ್ದಾರೆ.
ಜಬಲ್ಪುರ- ಮಹಾಕೌಶಲ್ ಎಕ್ಸ್'ಪ್ರೆಸ್'ನ 8 ಬೋಗಿಗಳು ಇಂದು ಬೆಳಗ್ಗೆ ಹಳಿ ತಪ್ಪಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ತನಿಖೆ ನಡೆಸುವಂತೆ ರೈಲ್ವೇ ಇಲಾಖೆ ರಾಜ್ಯ ಸಚಿವ ಮನೋಜ್ ಸಿನ್ಹಾ ಆದೇಶಿಸಿದ್ದಾರೆ.
ಘಟನೆ ಹಿಂದೆ ಭಯೋತ್ಪಾದಕರ ಕೃತ್ಯವಿದೆಯೆಂದು ಪರಿಶೀಲಿಸಲು ಉಗ್ರ ನಿಗ್ರಹ ದಳ (ಏಟಿಎಸ್) ಕೂಡಾ ಭೇಟಿ ನೀಡಿದೆ.