ಗಲ್ಫ್ ದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ 83 ಮಂದಿಯಿಂದು ಸುಮಾರು 45 ಲಕ್ಷ ರೂಪಾಯಿಗಳನ್ನು ಲಪಟಾಯಿಸಿದ ಆರೋಪದಲ್ಲಿ, ಕೇರಳದ ತ್ರಿಶೂರ್ ಮೂಲದ ಕೃಷ್ಣೆಂದು ಹಾಗೂ ಆಕೆಯ ಸಹವರ್ತಿ ಜಿನ್ಸನ್ (27) ಎಂಬಿಬ್ಬರನ್ನು   ಶನಿವಾರ  ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ.

ಕೊಚ್ಚಿ: ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ 83 ಮಂದಿಗೆ ವಂಚಿಸಿದ ಆರೋಪದಲ್ಲಿ 21 ವರ್ಷ ಪ್ರಾಯದ ಯುವತಿ ಹಾಗೂ ಆತನ ಸ್ನೇಹಿತನನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ.

ಗಲ್ಫ್ ದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ 83 ಮಂದಿಯಿಂದು ಸುಮಾರು 45 ಲಕ್ಷ ರೂಪಾಯಿಗಳನ್ನು ಲಪಟಾಯಿಸಿದ ಆರೋಪದಲ್ಲಿ, ಕೇರಳದ ತ್ರಿಶೂರ್ ಮೂಲದ ಕೃಷ್ಣೆಂದು ಹಾಗೂ ಆಕೆಯ ಸಹವರ್ತಿ ಜಿನ್ಸನ್ (27) ಎಂಬಿಬ್ಬರನ್ನು ಶನಿವಾರ ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ.

ಕೃಷ್ಣೆಂದು ಬೆಂಗಳೂರಿನ ಕಂಪನಿಯೊಂದರಲ್ಲಿ ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಕೆಲ ವರ್ಷಗಳಿಂದ ಜ್ಯುವೆಲ್ಲರಿ ಶಾಪ್’ವೊಂದರಲ್ಲಿ ಸೇಲ್ಸ್’ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಜಿನ್ಸನ್’ನೊಂದಿಗೆ ಸ್ನೇಹ ಹೊಂದಿದ್ದಾಳೆ. ಮೊದಲು ಜಿನ್ಸನ್ ಸ್ನೇಹಿತರನ್ನೇ ಟಾರ್ಗೆಟ್ ಮಾಡಿ ದುಬೈಯಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದುಕೊಂಡಿದ್ದಾಳೆ ಎನ್ನಲಾಗಿದೆ. ಪ್ರತಿಯೊಬ್ಬರಿಂದ ರೂ.53,000 ಪಡೆದುಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಳೆನ್ನಲಾಗಿದೆ.

ಬಳಿಕ ಆಕರ್ಷಕ ಫೇಸ್’ಬುಕ್ ಪ್ರೊಫೈಲ್ ಹಾಗೂ ವಾಟ್ಸಪ್ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ಬಲೆಗೆ ಹಾಕಿಕೊಂಡು, ಗಲ್ಫ್ ದೇಶಗಳಲ್ಲಿ ಉತ್ತಮ ಸಂಬಳದ ಉದ್ಯೋಗಗಳ ಆಮಿಷ ತೊರಿಸಿ ಅವರಿಂದಲೂ 53,000 ರೂಪಾಯಿಗಳನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಳು ಎನ್ನಲಾಗಿದೆ.

ಈ ರೀತಿ ಉದ್ಯೋಗಾಕಾಂಕ್ಷಿಗಳ ಪಟ್ಟಿ ಬೆಳೆಯುತ್ತ 83ಕ್ಕೆ ತಲುಪಿದೆ. ಆದರೆ ತಿಂಗಳುಗಳು ಕಳೆದರೂ ವೀಸಾ ಮಾತ್ರ ಯಾರಿಗೂ ಬಂದಿಲ್ಲ. ತಾವು ಮೋಸ ಹೋದ ಬಗ್ಗೆ ಅರಿವಾದಾಗ ಉದ್ಯೋಗಾಕಾಂಕ್ಷಿಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಉಪಾಯದಿಂದ ಕೊಚ್ಚಿಗೆ ಕರೆಸಿಕೊಂಡ ಪೊಲೀಸರು:

ಕೃಷ್ಣೇಂದುಳನ್ನು ಬೆಂಗಳೂರಿನಲ್ಲಿ ಹುಡುಕುವುದಕ್ಕಿಂತ ಠಾಣೆಗೆ ಕರೆಯುವುದೇ ಲೇಸೆಂದು ಭಾವಿಸಿದ ಕೊಚ್ಚಿ ಪೊಲೀಸರು, ಉದ್ಯೋಗ ಹುಡುಕುವ ನೆಪದಲ್ಲಿ ಆಕೆಗೆ ಕರೆ ಮಾಡಿದ್ದಾರೆ. ಹಣ ನಗದು ರೂಪದಲ್ಲಿರುವುದರಿಂದ ಬಂದು ಸಂಗ್ರಹಿಸುವಂತೆ ಆಕೆಯ ಮನವೊಲಿಸಿದ್ದಾರೆ. ಹಣವನ್ನು ಸಂಗ್ರಹಿಸಲು ಜಿನ್ಸನ್ ಜತೆ ಬೆಂಗಳೂರಿನಿಂದ ಹೊರಟು ಶನಿವಾರ ಕೊಚ್ಚಿ ತಲುಪಿದ್ದಾಳೆ. ಈಗ ಪೊಲೀಸರ ಅತಿಥಿಯಾಗಿದ್ದಾಳೆ.