Asianet Suvarna News Asianet Suvarna News

ಕನ್ನಡ ರಾಜ್ಯೋತ್ಸವ ದಿನದಂದೇ ಇಲ್ಲ ಪ್ರಶಸ್ತಿ: ಯಾಕೆ?

ಈ ಬಾರಿಯ ಕನ್ನಡ ರಾಜ್ಯೋತ್ಸವ ದಿನದಂದೇ ಪ್ರಶಸ್ತಿ ಇಲ್ಲ. ಕಾರಣ ಏನು? ಇಲ್ಲಿದೆ ಡಿಟೇಲ್ಸ್.

2018 kannada Rajyotsava award function postponed for bypoll code of conduct
Author
Bengaluru, First Published Oct 31, 2018, 5:54 PM IST
  • Facebook
  • Twitter
  • Whatsapp

ಬೆಂಗಳೂರು, [ಅ.31] : ಐದು ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕೊನೆ ಕ್ಷಣದಲ್ಲಿ ಮುಂದೂಡಲಾಗಿದೆ.

ಮಂಡ್ಯ, ರಾಮನಗರ, ಬಾಗಲಕೋಟೆ, ಬಳ್ಳಾರಿ ಶಿವಮೊಗ್ಗ ಉಪಚುನಾವಣೆ ಇರೋದ್ರಿಂದ ನೀತಿ ಸಂಹಿತೆ ಜಾರಿಲ್ಲಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ರಾಜ್ಯೋತ್ಸವ ಪ್ರಶಸ್ತಿಯನ್ನ ರದ್ದುಗೊಳಿಸಲಾಗಿದೆ. 

 ಇಂದು [ಬುಧವಾರ] ಗೃಹ ಕಚೇರಿ ಕೃಷ್ಣಾದಲ್ಲಿ 2018ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಂಬಂಧ ನಡೆಯಬೇಕಿದ್ದ ಸಭೆಯನ್ನ ಸಿಎಂ ಕುಮಾರಸ್ವಾಮಿ ರದ್ದುಗೊಳಿಸಿದ್ದಾರೆ.

 ಕನ್ನಡಕ್ಕೆ ಕೊಡುಗೆ ನೀಡಿದವರನ್ನ ಗುರುತಿಸಿ ಪ್ರತಿವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.  ಆದರೆ, ಇದೇ ಮೊದಲ ಬಾರಿ ಕನ್ನಡ ರಾಜ್ಯೋತ್ಸವ ದಿನದಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನವನ್ನು ಮುಂದೂಡಲಾಗಿದೆ.

 ಚುನಾವಣೆ ಮುಗಿದ ಬಳಿಕ ಪ್ರಶಸ್ತಿ ಆಯ್ಕೆ ಸಮಿತಿ ಸಭೆ ನಡೆಯಲಿದೆ.

Follow Us:
Download App:
  • android
  • ios