2016 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಅತ್ಯುತ್ತಮ ಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ಪ್ರಶಸ್ತಿಗಳ ವಿವರ ಈ ಕೆಳಗಿನಂತಿದೆ.

ಬೆಂಗಳೂರು (ಏ.11): 2016 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಬಿ.ಎಂ ಗಿರಿರಾಜ್ ನಿರ್ದೇಶನದ 'ಅಮರಾವತಿ' ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಚಲನ ಚಿತ್ರ ವಾರ್ಷಿಕ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ಅತ್ತ್ಯುತ್ತಮ ಚಿತ್ರ ಪ್ರಶಸ್ತಿಯು ರೂ.1 ಲಕ್ಷ ನಗದು ಹಾಗೂ 50 ಗ್ರಾಂ. ಚಿನ್ನದ ಪದಕವನ್ನೊಳಗೊಂಡಿದೆ.

ಅತ್ಯುತ್ತಮ ಚಿತ್ರ:- ಅಮರಾವತಿ, ನಿರ್ದೇಶನ- ಟಿ.ಎಂ ಗಿರಿರಾಜ್

ಎರಡನೇ ಅತ್ಯುತ್ತಮ ಚಿತ್ರ: ರೈಲ್ವೇ ಚಿಲ್ಡ್ರನ್, ನಿರ್ದೇಶನ-ಪೃಥ್ವಿ ಕೊಣನೂರ್

ಮೂರನೇ ಚಿತ್ರ: ಅಂತರ್ಜಲ, ನಿರ್ದೇಶನ- ಹರೀಶ್ ಕುಮಾರ್ ಎಲ್

ಅತ್ಯುತ್ತಮ ಮನರಂಜನಾ ಚಿತ್ರ: ಕಿರಿಕ್ ಪಾರ್ಟಿ, ನಿರ್ದೇಶನ-ರಿಷಬ್ ಶೆಟ್ಟಿ

ವಿಶೇಷ ಸಾಮಾಜಿಕ ಕಳಕಳಿ ಚಿತ್ರ: ಮೂಡ್ಲ ಸೀಮೆಯಲಿ

ಅತ್ಯುತ್ತಮ ಮಕ್ಕಳ ಚಿತ್ರ: ಜೀರ್ ಜಿಂಬೆ

 ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ರಾಮ ರಾಮ ರೇ

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಮದಿಪು (ತುಳು ಭಾಷೆ)

ಅತ್ಯುತ್ತಮ ನಟ: ಅಚ್ಯುತ್ ಕುಮಾರ್

ಅತ್ಯುತ್ತಮ ನಟಿ: ಶೃತಿ ಹರಿಹರನ್

ಅತ್ಯುತ್ತಮ ಪೋಷಕ ನಟ: ನವೀನ್ ಡಿ ಪಡೀಲ್

ಅತ್ಯುತ್ತಮ ಪೋಷಕ ನಟಿ: ಅಕ್ಷತಾ ಪಾಂಡವಪುರ

ಅತ್ಯುತ್ತಮ ಕಥೆ: ನಂದಿತಾ ಯಾದವ್

ಅತ್ಯುತ್ತಮ ಚಿತ್ರಕಥೆ: ಅರವಿಂದ್ ಶಾಸ್ತ್ರಿ

ಅತ್ಯುತ್ತಮ ಸಂಭಾಷಣೆ: ಬಿ.ಎಂ ಗಿರಿರಾಜ್

ಅತ್ಯುತ್ತಮ ಛಾಯಾಗ್ರಹಣ: ಶೇಖರ್ ಚಂದ್ರ

ಅತ್ಯುತ್ತಮ ಸಂಗೀತ ನಿರ್ದೇಶನ: ಎಂ.ಆರ್ ಚರಣ್ ರಾಜ್

ಅತ್ಯುತ್ತಮ ಹಿನ್ನೆಲೆ ಗಾಯಕ: ವಿಜಯ್ ಪ್ರಕಾಶ್

ಅತ್ಯುತ್ತಮ ಹಿನ್ನೆಲೆ ಗಾಯಕಿ: ಸಂಗೀತಾ ರವೀಂದ್ರನಾಥ್

ಅತ್ಯುತ್ತಮ ಬಾಲ ನಟ: ಮಾಸ್ಟರ್ ಮನೋಹರ್ ಕೆ

ಅತ್ಯುತ್ತಮ ಬಾಲ ನಟಿ: ಬೇಬಿ ಸಿರಿವಾನಳ್ಳಿ