ರಾಜ್ಯಪೊಲೀಸರಿಗೆ 2016 ನೇ ಸಾಲಿನ ‘ಮುಖ್ಯಮಂತ್ರಿಗಳ ಪದಕ’ ಪ್ರಕಟವಾಗಿದ್ದು, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ತನಿಖಾ ತಂಡದ ಮುಖ್ಯಸ್ಥರೂ ಆಗಿರುವ ಸಿಐಡಿ ಎಸ್ಪಿ ಎ. ಕುಮಾರಸ್ವಾಮಿ ಸೇರಿದಂತೆ 117 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಬೆಂಗಳೂರು (ಮಾ.30): ರಾಜ್ಯಪೊಲೀಸರಿಗೆ 2016 ನೇ ಸಾಲಿನ ‘ಮುಖ್ಯಮಂತ್ರಿಗಳ ಪದಕ’ ಪ್ರಕಟವಾಗಿದ್ದು, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ತನಿಖಾ ತಂಡದ ಮುಖ್ಯಸ್ಥರೂ ಆಗಿರುವ ಸಿಐಡಿ ಎಸ್ಪಿ ಎ. ಕುಮಾರಸ್ವಾಮಿ ಸೇರಿದಂತೆ 117 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಪ್ರತಿ ವಷರ್ ‘ಪೊಲೀಸ್ ಧ್ವಜ’ ದಿನಾಚರಣೆ ಅಂಗವಾಗಿ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ. ಬೆಂಗಳೂರಿನಲ್ಲಿ ಏಪ್ರಿಲ್ 2 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 

ಪುರಸ್ಕೃತರ ಪಟ್ಟಿ ಹೀಗಿದೆ

ಡಿಸಿಪಿ ಡಾ.ಪಿ.ಎಸ್.ಹರ್ಷ, ಸಿಐಡಿ ಎಸ್ಪಿ ಎ.ಕುಮಾರಸ್ವಾಮಿ, ಬೆಸ್ಕಾಂ ಎಸ್ಪಿ ಡಾ.ಕೆ.ವಿ.ಜಗದೀಶ್, ಕೆಎಸ್‌ಆರ್‌ಪಿ ಉಪ ಕಮಾಡೆಂಟ್ ಸುಂದರಾಜು, ಯಶವಂತಪುರ ಉಪ ವಿಭಾಗದ ಎಸಿಪಿ ರವಿ ಪ್ರಸಾದ್, ಗುಪ್ತದಳ ಡಿವೈಸ್ಪಿಗಳಾದ ಡಿ.ಕುಮಾರ್, ಡಾ.ಎಸ್.ಪ್ರಕಾಶ್, ಮಡಿವಾಳದ ಎಸಿಪಿ ಎ.ವಿ.ಲಕ್ಷ್ಮೀನಾರಾಯಣ, ಮೈಕೋ ಲೇಔಟ್ ಪಿಐ ಬಿ.ಕೆ.ಶೇಖರ್, ತಲಘಟ್ಟಪುರ ಠಾಣೆ ಪಿಐ ರಾಮಪ್ಪ ಗುತ್ತೇದಾರ್, ಸಿಸಿಬಿ ಪಿಐ ಮಲ್ಲಿಕಾರ್ಜುನ್, ಬಾಣಸವಾಡಿ ಪಿಐ ಡಿ.ಎಚ್.ಮುನಿಕೃಷ್ಣ, ವೈಯಾಲಿಕಾವಲ್ ಠಾಣೆ ಪಿಐ ಶ್ರೀಧರ್ ಕೆ.ಪೂಜಾರ್, ಕುಮಾರಸ್ವಾಮಿ ಲೇಔಟ್ ಠಾಣೆ ಪಿಐ ಕೆ.ಸಿ.ಗಿರಿ, ಇಂಟರ್‌ಪೋಲ್ ಪಿಐ ಸೈಯದ್ ತಬ್ರೇಜ್, ಸಿಐಡಿ ಪಿಐ ಬಿ.ಪ್ರಮೋದ್ ಕುಮಾರ್, ಐಎಸ್‌ಡಿ ಪಿಐ ಎನ್.ಮಹೇಶ್, ವಿಧಾನಸಭಾ ಸಚಿವಾಲಯದ ಸಹಾಯಕ ಮಾರ್ಷಲ್ ಎಚ್.ವಿ.ಸಂತೋಷ್ ಕುಮಾರ್, ಕೆಎಸ್‌ಆರ್‌ಪಿ ೩ನೇ ಪಡೆಯ ಸ್ಪೆಷಲ್ ಆರ್‌ಪಿಐ ಶರಣಬಸವ, ಅತ್ತಿಬೆಲೆ ವೃತ್ತದ ಪಿಐ ಎಲ್.ವೈ.ರಾಜೇಶ್, ಹೆಬ್ಬಗೋಡಿ ಠಾಣೆ ಪಿಐ ಕೆ.ವಿಶ್ವನಾಥ್, ರೈಲ್ವೆ ಪಿಐ ಎಚ್.ಲಕ್ಷ್ಮೀನಾರಾಯಣ ಪ್ರಸಾದ್, ಸಿಸಿಬಿ ಪಿಐ ವಿ.ಎಲ್.ರಮೇಶ್, ಎಚ್‌ಎಎಲ್ ಠಾಣೆ ಪಿಐ ಸಾದಿಕ್ ಪಾಷ, ಆರ್‌ಪಿಐ ಜೆ.ಶ್ರೀನಿವಾಸ್, ಜಯನಗರ ಸಂಚಾರ ಠಾಣೆ ಪಿಐ ಎಸ್.ಪಿ.ಉಮಾಮಹೇಶ್, ರಾಮಮೂರ್ತಿ ನಗರ ಠಾಣೆ ಪಿಐ ಚಂದ್ರಾಧರ, ವೈಟ್‌ಫೀಲ್ಡ್ ಠಾಣೆ ಪಿಐ ಕೆ.ರವಿ, ಕಬ್ಬನ್ ಪಾರ್ಕ್ ಠಾಣೆ ಪಿಎಸ್‌ಐ ಶ್ಯಾಮ್, ನಗರ ವಿಶೇಷ ಶಾಖೆ ಬಿ.ಎ.ಲಕ್ಷ್ಮೀನಾರಾಯಣ್, ಹಲಸೂರು ಪಿಎಸ್‌ಐ ಅರುಣ್ ಸಾಳುಂಕೆ, ಆರ್‌ಎಸ್‌ಐ (ನೇಮಕಾತಿ ವಿಭಾಗ) ಮಂಜುನಾಥ್, ಕಮರ್ಷಿಯಲ್ ಸ್ಟ್ರೀಟ್ ಪಿಎಸ್‌ಐ ಗೌರಿಶಂಕರ್, ಗುಪ್ತವಾರ್ತೆ ಪಿಎಸ್‌ಐ (ಪ್ರಭಾರ)ಗಳಾದ ಭೀಮೇಗೌಡ, ವಿ.ವೆಂಕಟಸ್ವಾಮಿ, ಎಆರ್‌ಎಸ್‌ಐ ಎಚ್.ಎಂ.ರಾಮಾಂಜನಿ, ವೈರ್‌ಲೈಸ್ ಎಎಸ್‌ಐ ಲಾಜಿಮ್, ಯಲಹಂಕದ ಎಪಿಟಿಎಸ್ ಎಲ್.ಮರಿದೇವರು, ಸೆಂಟ್ರಲ್ ಜೈಲ್ ವೈರ್‌ಲೆಸ್ ವಿಭಾಗದ ಎಎಸ್‌ಐ ಎಂ.ಆರ್.ಮಂಜುನಾಥ್ , ಎಪಿಟಿಎಸ್‌ನ ಎಆರ್‌ಎಸ್‌ಐ ಎಫ್.ಕೆ.ಹಾವನೂರು, ಬಸನವಗುಡಿ ಸಂಚಾರ ಠಾಣೆ ಎಚ್‌ಸಿ ವಿ.ಹೊನ್ನರಾಜಯ್ಯ, ಉಪ್ಪಾರಪೇಟೆ ಠಾಣೆ ಎಚ್‌ಸಿ ಜಿ.ಶ್ರೀನಿವಾಸ್ ಶೆಟ್ಟಿ, ಸಿಆರ್ ದಕ್ಷಿಣ ವಿಭಾಗದ ಸಿಎಚ್‌ಸಿ ತಿಮ್ಮರಾಯಪ್ಪ, ಸಿಸಿಬಿ ಎಚ್‌ಸಿ ಜಿ.ರಂಗನಾಥ್, ಸಿಐಡಿ ಎಚ್‌ಸಿಗಳಾದ ಬಿ.ಸಿ.ಪರಮೇಶ್, ಕೆ.ಮುನಿವೆಂಕಟಪ್ಪ, ಲಕ್ಷ್ಮೀದೇವಮ್ಮ, ಐಎಸ್‌ಡಿ ಎಚ್‌ಸಿ ಎನ್.ಚರ್ತುಭುಜ ರಾಜಕುಮಾರ್, ಎಸ್‌ಸಿಆರ್‌ಬಿ ಕೆ.ಸುಜಾತ, ಕೆಎಸ್‌ಆರ್‌ಪಿ ೯ನೇ ಪಡೆಯ ಸ್ಪೆಷಲ್ ಆರ್‌ಎಚ್‌ಸಿ ಜಿ.ಶಿವಕುಮಾರ್, ಗುಪ್ತದಳ ಎಚ್‌ಸಿಗಳಾದ ಸಿ.ಕುಮುದ, ಎಸ್.ದಕ್ಷಿಣ ಮೂರ್ತಿ, ಬಿಡಿಎ ಎಚ್‌ಸಿ ಎಚ್.ನರಸಿಂಹಮೂರ್ತಿ, ಎಸಿಬಿ ಎಚ್‌ಸಿ ಕೆ.ರಮೇಶ್, ರೈಲ್ವೆಯ ಅಪರಾಧ ವಿಭಾಗದ ರಮೇಶ್, ಕಬ್ಬನ್ ಪಾರ್ಕ್ ಠಾಣೆ ಎಚ್‌ಸಿ ಸಿ.ಮಲ್ಲಿಕಾರ್ಜುನ್, ಇಂಟರ್‌ಪೋಲ್‌ನ ಪಿಸಿ ಎಂ.ವೈ.ರಾಮು, ಎಸ್‌ಸಿಆರ್‌ಬಿ ಪಿಸಿ ಕೆ.ಭಾಸ್ಕರಯ್ಯ, ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪಿಸಿ ಕೆ.ಕುಪ್ಪೇಂದ್ರ.