2008ರ ಮಾಲೆಂಗಾವ್ ಸ್ಫೋಟ ಪ್ರಕರಣದ ಆರೋಪಿ ಕರ್ನಲ್ ಶ್ರೀಕಾಂತ್​ ಪ್ರಸಾದ್ ಪುರೋಹಿತ್‌ಗೆ ಜಾಮೀನು ಸಿಕ್ಕಿದೆ. 9 ವರ್ಷಗಳ ನಂತರ​ ಕರ್ನಲ್​ ಪುರೋಹಿತ್​'ಗೆ ಸುಪ್ರೀಂಕೋರ್ಟ್​ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ನವದೆಹಲಿ (ಆ.21): 2008ರ ಮಾಲೆಂಗಾವ್ ಸ್ಫೋಟ ಪ್ರಕರಣದ ಆರೋಪಿ ಕರ್ನಲ್ ಶ್ರೀಕಾಂತ್​ ಪ್ರಸಾದ್ ಪುರೋಹಿತ್‌ಗೆ ಜಾಮೀನು ಸಿಕ್ಕಿದೆ. 9 ವರ್ಷಗಳ ನಂತರ​ ಕರ್ನಲ್​ ಪುರೋಹಿತ್​'ಗೆ ಸುಪ್ರೀಂಕೋರ್ಟ್​ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

9 ವರ್ಷಗಳಿಂದ ಜೈಲಿನಲ್ಲಿರುವ ಕರ್ನಲ್​ ಪುರೋಹಿತ್​ 2008ರ ಮಹಾರಾಷ್ಟ್ರದ ಮಾಲೆಗಾಂವ್​'ನಲ್ಲಿ ನಡೆದಿದ್ದ​ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪವಿದೆ. ಈ ಹಿಂದೆ ಪ್ರಮುಖ ಆರೋಪಿ ಸಾಧ್ವಿಗೆ 5 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ನೀಡಿ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.

ಆದರೆ ಕರ್ನಲ್​ ಪುರೋಹಿತ್​'ಗೆ ಮಾತ್ರ ಜಾಮಿನು ಸಿಕ್ಕಿರಲಿಲ್ಲ. ಹೀಗಾಗಿ ಕರ್ನಲ್​ ಪುರೋಹಿತ್​ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್​ ಇವತ್ತು ಷರತ್ತು ಬದ್ಧ ಜಾಮೀನು ನೀಡಿದೆ.

ಮಲೆಗಾಂವ್ ಸ್ಫೋಟ:

2008ರ ಸೆಪ್ಟೆಂಬರ್‌ 8ರಂದು ಮಾಲೇಗಾಂವ್‌'ನಲ್ಲಿ ಸ್ಪೋಟ ಸಂಭವಿಸಿತ್ತು. ಮೋಟಾರ್‌ ಸೈಕಲ್‌ನಲ್ಲಿ ಅಳವಡಿಸಿದ್ದ 2 ಬಾಂಬ್ ಸ್ಫೋಟಗೊಂಡು 7 ಮಂದಿ ಸಾವನ್ನಪ್ಪಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ನಂತರ ಇದು ಅಭಿನವ್ ಭಾರತ್ ಎನ್ನುವ ಸಂಘಟನೆಯ ಕೃತ್ಯ ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು. ಇದರೊಂದಿಗೆ ಕರ್ನಲ್ ಪುರೋಹಿತ್ ಅವರನ್ನು 2008ರಲ್ಲಿ ಬಂಧಿಸಲಾಗಿದ್ದು ಆಗಿನಿಂದ ಅವರು ಜೈಲಿನಲ್ಲಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಪ್ರಗ್ಯಾ ಸಿಂಗ್ ಠಾಕೂರ್, ಪುಣೆಯ ಅಭಿನವ್ ಭಾರತ್ ಸಂಘಟನೆ ಹಾಗೂ ಸೇನಾಧಿಕಾರಿ ಪುರೋಹಿತ್ ಹಾಗೂ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯರನ್ನು ಕೂಡ ಬಂಧಿಸಲಾಗಿತ್ತು.