ನಗರದ ವಿವಿಧ ಮಾರುಕಟ್ಟೆಗಳಲ್ಲಿ ಸದ್ಯದ ಹೂವಿನ ಬೆಲೆಯಿದು. ಶ್ರಾವಣ ಮಾಸದ ಶುಕ್ರವಾರ ಬರುವ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಾರುಕಟ್ಟೆಗಳಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆ ನಡುವೆಯೂ ಹಬ್ಬ ಆಚರಿಸುವ ಸಂಭ್ರಮ ಮಾತ್ರ ಕಡಿಮೆಯಾಗಿಲ್ಲ. ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಶಿವಾಜಿನಗರ ಸೇರಿದಂತೆ ವಿವಿ‘ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿ ನಡೆಯುತ್ತಿದೆ.

ಕನಕಾಂಬರ ಕೆ.ಜಿ.ಗೆ 1000ರಿಂದ 2000!

ಮಲ್ಲಿಗೆ ಮೊಗ್ಗು ಕೆ.ಜಿ.ಗೆ 300ರಿಂದ 500!

ಗುಲಾಬಿ ಹಾರ 600ರಿಂದ 1000!

ನಗರದ ವಿವಿಧ ಮಾರುಕಟ್ಟೆಗಳಲ್ಲಿ ಸದ್ಯದ ಹೂವಿನ ಬೆಲೆಯಿದು. ಶ್ರಾವಣ ಮಾಸದ ಶುಕ್ರವಾರ ಬರುವ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಾರುಕಟ್ಟೆಗಳಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆ ನಡುವೆಯೂ ಹಬ್ಬ ಆಚರಿಸುವ ಸಂಭ್ರಮ ಮಾತ್ರ ಕಡಿಮೆಯಾಗಿಲ್ಲ. ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಶಿವಾಜಿನಗರ ಸೇರಿದಂತೆ ವಿವಿ‘ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿ ನಡೆಯುತ್ತಿದೆ.

ನಗರದ ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಮಲ್ಲಿಗೆ ಹಾರ ವಿನ್ಯಾಸ, ತೂಕಕ್ಕೆ ತಕ್ಕ ಹಾಗೆ 300 ರುಪಾಯಿಯಿಂದ 500 ರು.ವರೆಗೆ ಮಾರಾಟ ವಾಗುತ್ತಿದೆ. ಗುಲಾಬಿ ಹಾರ 600, 700, 1000ರುಪಾಯಿ ಹಾಗೂ ಸೇವಂತಿಗೆ ಮೊಳಕ್ಕೆ 50 ರು., ಬಿಡಿ ಮಲ್ಲಿಗೆ 100 ಗ್ರಾಂಗೆ 20ರಿಂದ 40 ರು.ಗೆ ಏರಿಕೆಯಾಗಿದ್ದು, 100 ರವರೆಗೂ ಹೆಚ್ಚಳವಾಗುವ ಸೂಚನೆ ನೀಡುತ್ತಾರೆ ವ್ಯಾಪಾರಿಗಳು.

ನಾಗರ ಪಂಚಮಿ ನಂತರ ಬರುವ ಹಬ್ಬ ವರಮಹಾಲಕ್ಷ್ಮೀ. ಈ ಹಬ್ಬ ಎಂದರೆ ಎಲ್ಲರಿಗೂ ಬಹಳ ಪ್ರಿಯವಾದುದು. ಮುತ್ತೈದೆಯರು ಭಕ್ತಿ, ಶ್ರದ್ಧೆಯಿಂದ ಈ ವರಮಹಾಲಕ್ಷ್ಮಿ ವ್ರತವನ್ನು ಕೈಗೊಳ್ಳುತ್ತಾರೆ. ಅದಕ್ಕಾಗಿ 15 ದಿನಗಳಿಂದಲೇ ತಯಾರಿಯನ್ನೂ ನಡೆಸುವುದು ಗಮನಾರ್ಹ. ಬೆಲೆ ಏರಿಕೆ ಬಿಸಿಗೆ ಜನಸಾಮಾನ್ಯರು ತತ್ತರಿಸಿದ್ದಾರೆ.

ಮಹಿಳೆಯರು, ಹೆಣ್ಣು ಮಕ್ಕಳು ಹಬ್ಬದ ಸಂಭ್ರಮಕ್ಕೆ ಮೆರಗು ನೀಡಲು ಸತತ ಒಂದು ವಾರದಿಂದಲೂ ಸಜ್ಜಾಗಿದ್ದಾರೆ. ಇತ್ತ ಮಾರುಕಟ್ಟೆಗಳಲ್ಲೂ ಭರ್ಜರಿ ವ್ಯಾಪಾರ ನಡೆಯುತ್ತಿದೆ.

ಟೊಮೆಟೋ 40 ರು.:

ಇದೇ ವೇಳೆ ನಾಟಿ ಟೊಮೆಟೋ 100 ರೂ.ನಿಂದ 40ಕ್ಕೆ ಇಳಿಕೆ ಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಲವೆಡೆ 40ರಿಂದ 55 ರು.ವರೆಗೆ ಮಾರಾಟವಾಗುತ್ತಿದೆ. ಅತಿ ಬೇಡಿಕೆಯುಳ್ಳ ಕೊತ್ತಂಬರಿ ಸೊಪ್ಪಿನ ಬೆಲೆ 10ರಿಂದ 20 ರು. ಹಾಗೂ ಪುದೀನ ಕಂತೆಗೆ 5ರಿಂದ 10 ರು.ಗೆ ಮಾರಾಟವಾಗುತ್ತಿದೆ.

ಹಬ್ಬದ ಪ್ರಯುಕ್ತ ಖರೀದಿಯಲ್ಲಿ ನಿರತರಾಗಿದ್ದ ರಾಜರಾಜೇಶ್ವರಿ ನಗರದ ಅಮುದಾ ಅವರನ್ನು ಮಾತಿಗೆಳೆದಾಗ, ‘ಪ್ರತಿ ಪದಾರ್ಥಗಳ ಬೆಲೆಯೂ ಏರಿಕೆಯಾಗಿದೆ. ಹಬ್ಬಕ್ಕೆ ಮೂರು ದಿನ ಮುಂಚಿತವಾಗಿಯೇ ನಾವು ಹೂವು ಖರೀದಿಸಿಡುತ್ತೇನೆ. ಮಾರುಕಟ್ಟೆಗಳಲ್ಲಿ ವಿಪರೀತ ಬೆಲೆ. ಮಲ್ಲಿಗೆ, ತರಕಾರಿ ಬೆಲೆ ಹೆಚ್ಚಳಗೊಂಡಿದೆ ಎಂದು ಹೇಳಿದರು.

ಜೊತೆಗೆ, ವೀಳ್ಯೆದೆಲೆ 60ಕ್ಕೆ 50ರಿಂದ 100 ರು. ಗೆ ಮಾರಾಟಗೊಳ್ಳುತ್ತಿದೆ. ಮನೆ ಬಳಿಯೇ ಬಿಡಿ ಹೂವು ಕೊಳ್ಳೋಣವೆಂದರೆ, ದಿನಂಪ್ರತಿ ಹೂವು ಮಾರಿಕೊಂಡು ಬರುತ್ತಿದ್ದವರೂ ಎರಡು ದಿನದಿಂದ ಇತ್ತ ಸುಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡರು.