ತುಮಕೂರು(ಸೆ.19): ಶಾಲೆಯಲ್ಲಿ ಚಾಕೊಲೇಟ್ ತಿಂದು 20 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ತುಮಕೂರಿನ ಗುಬ್ಬಿ ಪಟ್ಟಣದ ಶುಭೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ. 

ಭುವನ್ ಎನ್ನುವ ವಿದ್ಯಾರ್ಥಿ ತಮ್ಮ ಹುಟ್ಟುಹಬ್ಬದ ಹಿನ್ನಲೆಯಲ್ಲಿ ನಿಂಬು ಪಾನಿ ಎಂಬ ಹೆಸರಿನ ಚಾಕಲೇಟ್ ತಂದು ಸ್ನೇಹಿತರಿಗೆ ಹಂಚಿದ್ದಾರೆ.

ಈ ವೇಳೆ ಚಾಕೊಲೇಟ್ ತಿನ್ನುತಿದ್ದಂತೆ ಮಕ್ಕಳಿಗೆ ವಾಂತಿ ಭೇದಿ, ಹೊಟ್ಟೆ ನೋವು ಉಲ್ಭಣಗೊಂಡಿದೆ. ಕೂಡಲೇ ಮಕ್ಕಳನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಅಸ್ವಸ್ಥರಾದ ಮಕ್ಕಳು 4ನೇ ತರಗತಿಯ ವಿದ್ಯಾರ್ಥಿಗಳು ಎನ್ನಲಾಗಿದೆ.