ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ತೇಜೋವಧೆ ಮಾಡುವಂತಹ ಹಾಗೂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಗೊಳಿಸುವ ಲೇಖನಗಳನ್ನು ಹಾಗೂ ಹೇಳಿಕೆಯನ್ನು ಮುದ್ರಣ, ವಿದ್ಯುನ್ಮಾನ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸ ಬಾರದು: ಕೋರ್ಟ್

ಬೆಂಗಳೂರು (ಮೇ.03):ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ತೇಜೋವಧೆ ಮಾಡುವಂತಹ ಹಾಗೂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಗೊಳಿಸುವ ಲೇಖನಗಳನ್ನು ಹಾಗೂ ಹೇಳಿಕೆಯನ್ನು ಮುದ್ರಣ, ವಿದ್ಯುನ್ಮಾನ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸ ಬಾರದು ಎಂದು ಎಂ.ಎನ್‌ ಭಟ್‌ ಸೇರಿ 20 ಜನರಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಜೆಎಂಎಫ್‌ಸಿ ನ್ಯಾಯಾಲಯ ಮಧ್ಯಂತರ ನಿರ್ದೇಶನ ನೀಡಿದೆ. ಎಂ.ಎನ್‌.ಭಟ್‌ ಹಾಗೂ ಅವರ ಬೆಂಬಲಿಗರು ಶ್ರೀರಾಮಚಂದ್ರಾಪುರಮಠ ಹಾಗೂ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಆಧಾರ ರಹಿತವಾಗಿ ಹೇಳಿಕೆ ನೀಡುತ್ತಿರುವುದರಿಂದ ಸ್ವಾಮೀಜಿ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ಇದನ್ನು ಮಾಡ ದಂತೆ ನಿರ್ಬಂಧಿಸಬೇಕೆಂದು ಕೋರಿ ಅನಂತ ಭಟ್‌, ಲಲಿತಾ ಭಟ್‌, ಮಂಜಪ್ಪ ಬಾಬು ಅರ್ಜಿ ಸಲ್ಲಿಸಿದ್ದರು.