ದುರ್ಗಾ ಪೂಜೆ ಸಂದರ್ಭ ಹಿಂದೂಗಳು ಮತ್ತು ಜುವೆಲ್ ನಡುವೆ ಜಗಳ ನಡೆದಿತ್ತು. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಬೆದರಿಸುತ್ತಿದ್ದ ಜುವೆಲ್, ಇದೀಗ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಢಾಕಾ(ಡಿ.03): ಹಿಂದೂಗಳಿಗೆ ಸೇರಿದ 20 ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಬಾಂಗ್ಲಾದೇಶದ ದಿನಜ್`ಪುರದ ಬೊಚಾಗಂಜ್ ಉಪಾಸಿಲಾದಲ್ಲಿ ನಡೆದಿದೆ. ರೈಲ್ವೆ ಕಾಲೋನಿಯ 7 ಕುಟುಂಬಗಳಿಗೆ ಸೇರಿದ ಮನೆ ಇವಾಗಿವೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ, ಗಾಯ ಸಂಭವಿಸಿಲ್ಲ. ಬೆಂಕಿಯ ಸೂಚಬೆ ಅರಿತ ಜನ ಎಸ್ಕೇಪ್ ಆಗಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿದ ಜುವೆಲ್ ಎಂಬಾತನನ್ನ ಬಂಧಿಸಲಾಗಿದೆ.

ದುರ್ಗಾ ಪೂಜೆ ಸಂದರ್ಭ ಹಿಂದೂಗಳು ಮತ್ತು ಜುವೆಲ್ ನಡುವೆ ಜಗಳ ನಡೆದಿತ್ತು. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಬೆದರಿಸುತ್ತಿದ್ದ ಜುವೆಲ್, ಇದೀಗ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.