ಬಂಡಾಯದ ನೆಲದಲ್ಲಿ ಕಳಸಾ ಕಿಚ್ಚು ಮೊಳಗಿ  2ವರ್ಷಗಳೇ ಉರುಳಿವೆ. ಆದರೆ ಮಹಾದಾಯಿ-ಕಳಸಾ ಬಂಡೂರಿ ಹೋರಾಟಗಾರರ ಮೇಲಿನ ಪ್ರಕರಣವನ್ನು ಇನ್ನೂ ಕೂಡ ವಾಪಸ್  ಪಡೆದುಕೊಂಡಿಲ್ಲ. ಸರ್ಕಾರವು ಪ್ರಕರಣಗಳನ್ನು ವಾಪಸ್ ಪಡೆಯುವ ಭರವಸೆಯೊಂದನ್ನೇ ನೀಡಿ ಕೈ ತೊಳೆದುಕೊಂಡಿದೆ.

ಗದಗ(ನ.30): ಬಂಡಾಯದ ನೆಲದಲ್ಲಿ ಕಳಸಾ ಕಿಚ್ಚು ಮೊಳಗಿ  2ವರ್ಷಗಳೇ ಉರುಳಿವೆ. ಆದರೆ ಮಹಾದಾಯಿ-ಕಳಸಾ ಬಂಡೂರಿ ಹೋರಾಟಗಾರರ ಮೇಲಿನ ಪ್ರಕರಣವನ್ನು ಇನ್ನೂ ಕೂಡ ವಾಪಸ್  ಪಡೆದುಕೊಂಡಿಲ್ಲ. ಸರ್ಕಾರವು ಪ್ರಕರಣಗಳನ್ನು ವಾಪಸ್ ಪಡೆಯುವ ಭರವಸೆಯೊಂದನ್ನೇ ನೀಡಿ ಕೈ ತೊಳೆದುಕೊಂಡಿದೆ.  ನರಗುಂದ, ಜಗಾಪುರ, ಚಿಕ್ಕನರಗುಂದ, ಹದ್ಲಿ,  ಭೈರನಹಟ್ಟಿ, ಮದಗುಣಕಿ ಸೇರಿದಂತೆ ಹಲವು ಗ್ರಾಂಗಳ ಅಮಾಯಕ ರೈತರಿಗೆ ಸಮನ್ಸ್ ಜಾರಿಯಾಗಿದೆ. ಜಿಲ್ಲೆತ  ನರಗುಂಡ ತಾಲೂಕಿನ 50ಕ್ಕೂ ಹೆಚ್ಚು ರೈತರಿಗೆ ಸಮನ್ಸ್ ಜಾರಿಯಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.

ಸೆಕ್ಷನ್ 143, 147, 148, 427, 504 ಅಡಿಯಲ್ಲಿ ಪ್ರಕರಣ ದಾಖಲಿಸಿ, ನವೆಂಬರ್ 30ರಂದು ನರಗುಂಡ ಜೆಎಂಎಫ್'ಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್'ನಲ್ಲಿ ಆದೇಶಿಸಲಾಗಿದೆ. ಸರ್ಕಾರದ  ನಿರ್ಲಕ್ಷ್ಯದ ವಿರುದ್ಧ ಆಕ್ರೋಶಗೊಂಡ ಹೋರಾಟಗಾರರು, ಪ್ರಕರಣವನ್ನು ವಾಪಸ್ ಪಡೆದುಕೊಳ್ಳದಿದ್ದಲ್ಲಿ 2 ದಿನಗಳ ನಂತರ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು  ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.