ಓಖಿ ಚಂಡಮಾರುತದ ರಕ್ಕಸ ಅಲೆಗಳ ಅಬ್ಬರದಿಂದ ಮಂಗಳೂರಿನಿಂದ ಹೊರಟಿದ್ದ 2 ಹಡಗುಗಳು  ಲಕ್ಷದ್ವೀಪ ಬಳಿಯ ಕವರತಿ ಬಳಿ  ಮುಳುಗಡೆಯಾಗಿದೆ.

ಮಂಗಳೂರು (ಡಿ.01): ಓಖಿ ಚಂಡಮಾರುತದ ರಕ್ಕಸ ಅಲೆಗಳ ಅಬ್ಬರದಿಂದ ಮಂಗಳೂರಿನಿಂದ ಹೊರಟಿದ್ದ 2 ಹಡಗುಗಳು ಲಕ್ಷದ್ವೀಪ ಬಳಿಯ ಕವರತಿ ಬಳಿ ಮುಳುಗಡೆಯಾಗಿದೆ.

ಎರಡು ಹಡಗುಗಳಲ್ಲಿ ದಿನಸಿ, ತರಕಾರಿ, ಜಲ್ಲಿಯನ್ನು ಸಾಗಿಸಲಾಗುತ್ತಿತ್ತು. ಎರಡು ಹಡಗುಗಳಲ್ಲಿ 14 ಸಿಬ್ಬಂದಿಗಳಿದ್ದರು. ಹೆಲಿಕಾಪ್ಟರ್​ ಮೂಲಕ ನೌಕಾದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು ನಾಲ್ವರನ್ನು ರಕ್ಷಿಸಲಾಗಿದೆ. ಉಳಿದ 10 ಮಂದಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಓಕ್ಲಿ ಚಂಡಮಾರುತಕ್ಕೆ ಸಿಕ್ಕಿ ಕೇರಳ ಹಾಗೂ ತಮಿಳುನಾಡಿನ ಬೋಟ್'ಗಳು ಸಹ ನಿನ್ನೆ ಮುಳುಗಿವೆ. ಅದರ ಒಂದು ದೃಶ್ಯ

ಕನ್ಯಾಕುಮಾರಿಯಲ್ಲಿ ನಿನ್ನೆ ನಾಪತ್ತೆಯಾದ ಹಡಗು