ಯುಗಾದಿ ಪುಣ್ಯ ಸ್ನಾನಕ್ಕೆಂದು ನದಿಗಿಳಿದಾಗ ದುರ್ಮರಣ

First Published 18, Mar 2018, 4:09 PM IST
2 died in Triveni Sangama River
Highlights

ತಿ.ನರಸೀಪುರ ಪಟ್ಟಣದ ತ್ರಿವೇಣಿ ಸಂಗಮ ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವನ್ನಪ್ಪಿದ್ದಾರೆ. 

ಮೈಸೂರು (ಮಾ. 18): ತಿ.ನರಸೀಪುರ ಪಟ್ಟಣದ ತ್ರಿವೇಣಿ ಸಂಗಮ ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವನ್ನಪ್ಪಿದ್ದಾರೆ. 

ನರಸೀಪುರ  ತಾಲ್ಲೂಕಿನ ಬನ್ನಹಳ್ಳಿಹುಂಡಿ ಗ್ರಾಮದ  ಪ್ರಮೋದ್ (12) ಹಾಗೂ ತೇಜೇಂದ್ರಪ್ರಸಾದ್ (17) ಮೃತಪಟ್ಟ ದುರ್ದೈವಿಗಳು. 

ಯುಗಾದಿ ಹಿನ್ನೆಲೆಯಲ್ಲಿ ಪುಣ್ಯ ಸ್ನಾನ ಮಾಡಲು ತಿ.ನರಸೀಪುರ ಪಟ್ಟಣದ ತ್ರಿವೇಣಿ ಸಂಗಮ ನದಿಗೆ ಇಳಿದಾಗ ಈಜು ಬರದೇ ಮುಳುಗಿ ಸಾವನ್ನಪ್ಪಿದ್ದಾರೆ.  ನದಿಯಲ್ಲಿ ಮುಳುಗಿದ ಯುವಕರ ಶವಕ್ಕಾಗಿ 1 ಗಂಟೆಗೆ ಹೆಚ್ಚು ಕಾಲ ನುರಿತ ಈಜುಗಾರರು  ಶೋಧ ಕಾರ್ಯ ನಡೆಸಿದ್ದಾರೆ.   ನೀರು ಸೇವಿಸಿ ನಿತ್ರಾಣಗೊಂಡಿದ್ದ ತೇಜೇಂದ್ರಪ್ರಸಾದ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.  ಆತ ಕೂಡ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. 

ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

loader