ಬೆಂಗಳೂರು: ಪ್ರವಾಹದಿಂದ ಕೇರಳ ರಸ್ತೆಗಳು ಹದಗೆಟ್ಟಿ ರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ಬೆಂಗಳೂರಿನಿಂದ ಕೇರಳಕ್ಕೆ  ಕಾರ್ಯಾಚರಣೆ ಮಾಡುವ ಹವಾನಿಯಂತ್ರಿತ ಬಸ್‌ಗಳ  ಸಂಚಾರವನ್ನು ಆ.27 ಮತ್ತು 28ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 

ಈ ಎರಡು ದಿನಗಳ ಕಾಲ ಬೆಂಗಳೂರು -ಕಣ್ಣಾನೂರು, ಬೆಂಗಳೂರು-ಕಾಞಗಾಡ್ ಮತ್ತು ಬೆಂಗ ಳೂರು- ಕಲ್ಲಿಕೋಟೆ ನಡುವೆ ಸಂಚರಿಸುವ ಕರೋನ ಎ.ಸಿ.ಸ್ಲೀಪರ್, ಐರಾವತ ಮತ್ತು ಐರಾವತ ಕ್ಲಬ್ ಕ್ಲಾಸ್ ಬಸ್‌ಗಳ ಸಂಚಾರ ರದ್ಧುಗೊಳಿಸಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.