ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ತೋರುವ ತಾಯಿಗೆ ಹರಿದು ಬಂದ ಕಾಣಿಕೆಯನ್ನ ನೋಡಿ ಸ್ವತಃ ಭಕ್ತರೇ ದಂಗಾಗಿದ್ದಾರೆ. ಕಾಣಿಕೆ ಹುಂಡಿಯಲ್ಲಿ 1.35 ಕೋಟಿ ರೂ ಸಂಗ್ರಹವಾಗಿದ್ರೆ, ಸೀರೆ, ಲಾಡು ಹಾಗೂ ವಿಶೇಷ ಟಿಕೆಟ್ ಮಾರಾಟದಿಂದ 1.30ರೂ ಕೋಟಿ ಸಂಗ್ರಹವಾಗಿದೆ. 

ಹಾಸನ(ನ.02): ಹಾಸನದ ಅಧಿವೇವತೆ ಹಾಸನಾಂಬೆಗೆ ಈ ಬಾರಿ ಬಂಪರ್ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ಈ ಬಾರಿಯ 13 ದಿನಗಳ ಹಾಸನಾಂಬೆಯ ದರ್ಶನ ವೇಳೆ ಬರೋಬ್ಬರಿ 2.65 ಕೋಟಿ ಮೊತ್ತದ ದಾಖಲೆಯ ಕಾಣಿಕೆ ಹರಿದು ಬಂದಿದೆ.

ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ತೋರುವ ತಾಯಿಗೆ ಹರಿದು ಬಂದ ಕಾಣಿಕೆಯನ್ನ ನೋಡಿ ಸ್ವತಃ ಭಕ್ತರೇ ದಂಗಾಗಿದ್ದಾರೆ. ಕಾಣಿಕೆ ಹುಂಡಿಯಲ್ಲಿ 1.35 ಕೋಟಿ ರೂ ಸಂಗ್ರಹವಾಗಿದ್ರೆ, ಸೀರೆ, ಲಾಡು ಹಾಗೂ ವಿಶೇಷ ಟಿಕೆಟ್ ಮಾರಾಟದಿಂದ 1.30ರೂ ಕೋಟಿ ಸಂಗ್ರಹವಾಗಿದೆ. 

ಇದು ಹಾಸನಾಂಬೆ ಇತಿಹಾಸದಲ್ಲಿ ಅತ್ಯಧಿಕ ಕಾಣಿಕೆ ಸಂಗ್ರಹವಾಗಿದೆ. ಅಕ್ಟೋಬರ್ 20 ರಿಂದ ನವೆಂಬರ್ 1ರವರೆಗೆ ನಡೆದ ಹಾಸನಾಂಬೆ ದರ್ಶನ ನಡೆದಿತ್ತು. ಸನಿನ್ನೆ ಮಧ್ಯಾಹ್ನ ಹಾಸನಾಂಬೆಯ ದರ್ಶನಕ್ಕೆ ತೆರೆಬಿದ್ದಿತ್ತು, ಬಳಿಕ ಮಧ್ಯಾಹ್ನದಿಂದ ಮಧ್ಯರಾತ್ರಿ 2 ತನಕ 80 ಮಂದಿ ಸಿಬ್ಬಂದಿಗಳು ಕಾಣಿಕೆ ಲೆಕ್ಕಚಾರ ಕೆಲಸದಲ್ಲಿ ತೊಡಗಿದರು. 

ನಾಡಿನ ಮೂಲೆ ಮೂಲೆಗಳಿಂದ, ಹೊರರಾಜ್ಯ ಹಾಗೂ ವಿದೇಶಗಳಿಂದಲೂ ಭಕ್ತರು ಆಗಮಿಸಿ ದರ್ಶನ ಪಡೆದರು. ಕಳೆದ ಬಾರಿ 1.42 ಕೋಟಿ ರೂ ಹಣ ಭಕ್ತರಿಂದ ಹರಿದು ಬಂದಿತ್ತು. ವರ್ಷಕೊಮ್ಮೆ ದರುಶನ ತೋರೋ ಹಾಸನಾಂಬೆಗೆ ಭಕ್ತರಿಂದ ಈ ಪ್ರಮಾಣದಲ್ಲಿ ಕಾಣಿಕೆ ಪ್ರೀತಿ ಹರಿದು ಬಂದಿರೋದು ಹಾಸನಾಂಬೆಯನ್ನ ಹಿರಿಮೆಯನ್ನ ಮತ್ತಷ್ಟು ಹೆಚ್ಚಿಸಿದೆ.