ಮೊದಲನೇ ಜೋಡಿಯಾಗಿರುವ ರಮೇಶ್ ಮತ್ತು ಮಂಜುಳಾ ಇಬ್ಬರು 4 ವರ್ಷಗಳ ಹಿಂದೆ ರಂಗನಾಥಸ್ವಾಮಿ ಬೆಟ್ಟದಲ್ಲಿ ಮದುವೆಯಾಗಿದ್ದಾರೆ. ಇವರಿಗೆ ಪ್ರಾರ್ಥನಾ ಎಂಬ ಮಗುವೂ ಇದೆ. ಈ ಮಗುವಿನ ಹೆಸರಿನಲ್ಲಿ ಭಾಗ್ಯ ಲಕ್ಷ್ಮಿ ಬಾಂಡನ್ನು ಮಂಜುಳಾ ರಮೇಶ್ ಪಡೆದುಕೊಂಡಿದ್ದಾರೆ. ಇದಕ್ಕೆ ಅಂಗನವಾಡಿಯನ್ನು ದಾಖಲೆಗಳೂ ಸಿಗುತ್ತದೆ. ಆದರೆ, ಇದೆಲ್ಲವನ್ನೂ ಮುಚ್ಚಿಟ್ಟಿದ್ದಾರೆ. ಹಣಕ್ಕಾಗಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮತ್ತೊಂದು ಬಾರಿ ಮದುವೆಯನ್ನಾಗಿದ್ದಾರೆ.
ಚಿತ್ರದುರ್ಗ(ಡಿ.05): ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಯಂತಿಯಂದು ಅಂದ್ರೆ ಕಳೆದ ತಿಂಗಳ 20 ರಂದು ಹೊಳಲ್ಕೆರೆ ತಾಲೂಕಿನಲ್ಲಿ ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ಸರಳ ಸಾಮೂಹಿಕ ಮದುವೆ ಸಮಾರಂಭ ನಡೆಯಿತು. ವಿವಿಧ ಮಠಾಧೀಶರ ಸಮ್ಮುಖದಲ್ಲಿ 159 ಜೋಡಿಗಳು ಗೃಹಸ್ಥಾಶ್ರಮ ಕಾಲಿಟ್ಟರು.ಇದೇ ಮಹೋತ್ಸವದಲ್ಲಿ ಚಿತ್ರದುರ್ಗ ತಾಲೂಕಿನ ಬೆನಕನಹಳ್ಳಿಯ ಎರಡು ಜೋಡಿಗಳು ಮದುವೆಯಾಗಿದ್ದಾರೆ. ಆದರೆ, ಸರ್ಕಾರದಿಂದ ಬರುವ ಹಣ ಪಡೆಯಲು ಮರು ಮದುವೆಯಾಗಿರುವುದು ಇದೀಗ ಬೆಳಕಿಗೆ ಬಂದಿದೆ.
ಮೊದಲನೇ ಜೋಡಿಯಾಗಿರುವ ರಮೇಶ್ ಮತ್ತು ಮಂಜುಳಾ ಇಬ್ಬರು 4 ವರ್ಷಗಳ ಹಿಂದೆ ರಂಗನಾಥಸ್ವಾಮಿ ಬೆಟ್ಟದಲ್ಲಿ ಮದುವೆಯಾಗಿದ್ದಾರೆ. ಇವರಿಗೆ ಪ್ರಾರ್ಥನಾ ಎಂಬ ಮಗುವೂ ಇದೆ. ಈ ಮಗುವಿನ ಹೆಸರಿನಲ್ಲಿ ಭಾಗ್ಯ ಲಕ್ಷ್ಮಿ ಬಾಂಡನ್ನು ಮಂಜುಳಾ ರಮೇಶ್ ಪಡೆದುಕೊಂಡಿದ್ದಾರೆ. ಇದಕ್ಕೆ ಅಂಗನವಾಡಿಯನ್ನು ದಾಖಲೆಗಳೂ ಸಿಗುತ್ತದೆ. ಆದರೆ, ಇದೆಲ್ಲವನ್ನೂ ಮುಚ್ಚಿಟ್ಟಿದ್ದಾರೆ. ಹಣಕ್ಕಾಗಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮತ್ತೊಂದು ಬಾರಿ ಮದುವೆಯನ್ನಾಗಿದ್ದಾರೆ.
ಇದೇ ರೀತಿ ಇನ್ನೊಂದು ಜೋಡಿಯಾಗಿರುವ ದೀಪಾ ಮತ್ತು ಮಹೇಶ್, ಮೂರು ತಿಂಗಳ ಹಿಂದೆ ಬೆನಕನಹಳ್ಳಿಯಲ್ಲಿ ಮನೆಯ ಮುಂದೆ ಮದುವೆಯಾಗಿದ್ದಾರೆ. ಆದರೆ, ಸರ್ಕಾರದಿಂದ ಬರುವ ಪ್ರೋತ್ಸಾಹದ ಹಣ ಮೂರು ಲಕ್ಷದ ಆಸೆಗೆ ಮದುವೆಯಾಗಿರೋ ವಿಷಯ ಮುಚ್ಚಿಟ್ಟು, ಸರಳ ಸಾಮೂಹಿಕ ಮದುವೆ ಸಮಾರಂಭದಲ್ಲಿ ಮತ್ತೆ ಮದುವೆಯಾಗಿದ್ದಾರೆ.
ಇದು ಸಮಾಜ ಕಲ್ಯಾಣ ಇಲಾಖೆಗಾಗಲಿ ಅಥವ ಸಚಿವರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಹಣಕ್ಕಾಗಿ ಇಂತಹ ಸುಳ್ಳು ಹೇಳಿಕೊಂಡು ಬರುವವರ ವಿರುದ್ಧ ಕ್ರಮವನ್ನು ಇಲಾಖೆ ಜರುಗಿಸಬೇಕಾಗಿದೆ.