1996 ರಲ್ಲಿ ನಡೆದ ಸೋನೆಪತ್ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಲಷ್ಕರೆ-ತೋಯ್ಬಾದ  ಅಬ್ದುಲ್ ಕರೀಮ್ ಅಲಿಯಾಸ್ ತುಂಡಾಗೆ  ಹರ್ಯಾಣ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅವರ ಮೇಲೆ 1 ಲಕ್ಷ ರೂ ದಂಡವನ್ನೂ ವಿಧಿಸಿದೆ.

ನವದೆಹಲಿ (ಅ.10): 1996 ರಲ್ಲಿ ನಡೆದ ಸೋನೆಪತ್ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಲಷ್ಕರೆ-ತೋಯ್ಬಾದ ಅಬ್ದುಲ್ ಕರೀಮ್ ಅಲಿಯಾಸ್ ತುಂಡಾಗೆ ಹರ್ಯಾಣ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅವರ ಮೇಲೆ 1 ಲಕ್ಷ ರೂ ದಂಡವನ್ನೂ ವಿಧಿಸಿದೆ.

ಇಂದು ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಉಸ್ತುವಾರಿ ನ್ಯಾಯಾಲಯ ಅಬ್ದುಲ್ ಕರೀಮ್’ಗೆ ಐಪಿಸಿ ಸೆಕ್ಷನ್ 307 (ಹತ್ಯೆ ಪ್ರಯತ್ನ), 120 ಬಿ (ಪಿತೂರಿ) ಅಡಿಯಲ್ಲಿ ಶಿಕ್ಷೆಯನ್ನು ವಿಧಿಸಿದೆ. ಈ ತೀರ್ಪನ್ನು ಪ್ರಶ್ನಿಸಿ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಾಗಿ ಕರೀಮ್ ಪರ ವಕೀಲರು ಹೇಳಿದ್ದಾರೆ.

26/11 ಮುಂಬೈ ದಾಳಿಯ ನಂತರ 20 ಜನ ಭಯೋತ್ಪಾದಕರಲ್ಲಿ ಅಬ್ದುಲ್ ಕರೀಮ್ ಕೂಡಾ ಒಬ್ಬರು. ಅವರನ್ನು ನಮ್ಮ ವಶಕ್ಕೆ ನೀಡಿ ಎಂದು ಭಾರತ ಪಾಕಿಸ್ತಾನಕ್ಕೆ ಕೇಳಿಕೊಂಡಿತ್ತು. ಆನಂತರ 2013 ರಲ್ಲಿ ಅವರನ್ನು ಭಾರತ-ನೇಪಾಳ ಗಡಿಯಲ್ಲಿ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದರು.

1996 ರಲ್ಲಿ ಸೋನೆಪತ್’ನಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಅದೃಷ್ಟವಶಾತ್ ಯಾರೂ ಕೂಡಾ ಸಾವನ್ನಪ್ಪಿರಲಿಲ್ಲ. ಕೆಲವರು ಗಾಯಗೊಂಡಿದ್ದರು.