Asianet Suvarna News Asianet Suvarna News

ಕ್ರಿಮಿಯಾ ಕಾಲೇಜಿನಲ್ಲಿ ಗುಂಡಿನ ದಾಳಿ: 18 ಸಾವು!

ಕಾಲೇಜಿನಲ್ಲಿ ಗುಂಡಿನ ದಾಳಿಗೆ ಬೆಚ್ಚಿಬಿದ್ದ ರಷ್ಯಾ! ಕ್ರಿಮಿಯಾ ಕಾಲೇಜಿನಲ್ಲಿ ವಿದ್ಯಾರ್ಥಿಯಿಂದ ಗುಂಡಿನ ಸುರಿಮಳೆ! ಘಟನೆಯಲ್ಲಿ 50ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ! ಕ್ರಿಮಿಯನ್ ಟ್ರೇಡ್ ಕಾಲೇಜಿನಲ್ಲಿ ಬಾಂಬ್ ಸ್ಪೋಟ! ಕಾಲೇಜಿನ ವಿದ್ಯಾರ್ಥಿಯಿಂದಲೇ ಗುಂಡಿನ ದಾಳಿ! ಉನ್ನತ ಮಟ್ಟದ ತನಿಖೆಗೆ ಅಧ್ಯಕ್ಷ ಪುಟಿನ್ ಆದೇಶ 
 

18 people killed in attack at Crimea college
Author
Bengaluru, First Published Oct 17, 2018, 10:02 PM IST

ಮಾಸ್ಕೋ(ಅ.17): ರಷ್ಯಾದ ಕ್ರಿಮಿಯಾ ಕಾಲೇಜಿನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ವಿದ್ಯಾರ್ಥಿಗಳು ಸೇರಿ 18 ಜನ ಸಾವಿಗೀಡಾಗಿದ್ದಾರೆ. 

ಇನ್ನು ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಪೊಲೀಸರು ಸ್ಥಳವನ್ನು ಸುತ್ತುವರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕ್ರಿಮಿಯನ್ ಟ್ರೇಡ್ ಕಾಲೇಜಿನಲ್ಲಿ ಬಾಂಬ್ ಸ್ಪೋಟ ಸಂಭವಿಸಿದ್ದು, ಶಂಕಿತ ದಾಳಿಕೋರ ಸಹ ಇದೇ ಕಾಲೇಜು ವಿದ್ಯಾರ್ಥಿ ಎಂದು ಹೇಳಲಾಗಿದೆ. ಅಲ್ಲದೇ ಘಟನೆಯಲ್ಲಿ ಆತ ಕೂಡ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಪೋಟಕ್ಕೆ ಅತ್ಯಾಧುನಿಕ ಸ್ಪೋಟಕ ಸಾಮಗ್ರಿಗಳನ್ನು ಬಳಸಲಾಗಿದೆ. ಇದನ್ನು ಭಯೋತ್ಪಾದಲ ದಾಳಿಯೆಂದು ಪರಿಗಣಿಸಿ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇನ್ನು ಘಟನೆಯನ್ನು ತೀವ್ರವಾಗಿ ಖಂಡಿಸಿರುವ ರಷ್ಯಾದ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್,  ಫೆಡರಲ್ ಸೆಕ್ಯೂರಿಟಿ ಸರ್ವೀಸ್ ಮಟ್ಟದ ತನಿಖೆಗೆ ನಿರ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios