ರೇಷ್ಮೆ ಮತ್ತು ಉಣ್ಣೆಯಿಂದ ತಯಾರಿಸಲ್ಪಟ್ಟಿರುವ ಈ ಕಾರ್ಪೆಟ್`ನಲ್ಲಿ ಹೂ ಮತ್ತು ಸಿಂಹ ಸೇರಿದಂತೆ ಪ್ರಾಣಿಗಳ ಚಿತ್ರ ಬಿಡಿಸಲಾಗಿದೆ.  ಕಾರ್ಪೆಟ್ ಶೈಲಿ, ಬಣ್ಣ ಮತ್ತು ತಂತ್ರಜ್ಞಾನವನ್ನ ಆಧರಿಸಿ ಇದು ಅಂದು ಭಾರತದ ಭಾಗವಾಗಿದ್ದ ಲಾಹೋರ್`ನಲ್ಲಿ ತಯಾರಿಸಿರುವ ಕಾರ್ಪೆಟ್ ಎಂಬ ನಿರ್ಧಾರಕ್ಕೆ ಇತಿಹಾಸ ತಜ್ಞರು ಬಂದಿದ್ದಾರೆ.

ರೇಷ್ಮೆಯಿಂದ ತಯಾರಿಸಿದ, ಅದ್ದೂರಿ ಕಲಾಕೃತಿಯನ್ನೊಳಗೊಂಡ 17ನೇ ಶತಮಾನದಲ್ಲಿ ಭಾರತದಲ್ಲಿ ತಯಾರಾಗಿದೆ ಎನ್ನಲಾದ ಕಾರ್ಪೆಟ್ ಡಚ್ ಹಡಗಿನಲ್ಲಿ ಸಿಕ್ಕಿದೆ. ನೆದರ್ ಲ್ಯಾಂಡ್`ನಲ್ಲಿ ದೊರೆತ 400 ವರ್ಷಗಳಷ್ಟು ಹಳೆಯದಾದ ಡಚ್ ಹಡಗಿನ ಅವಶೇಷದಲ್ಲಿ ಈ ಕಾರ್ಪೆಟ್ ಪತ್ತೆಯಾಗಿದೆ.

ರೇಷ್ಮೆ ಮತ್ತು ಉಣ್ಣೆಯಿಂದ ತಯಾರಿಸಲ್ಪಟ್ಟಿರುವ ಈ ಕಾರ್ಪೆಟ್`ನಲ್ಲಿ ಹೂ ಮತ್ತು ಸಿಂಹ ಸೇರಿದಂತೆ ಪ್ರಾಣಿಗಳ ಚಿತ್ರ ಬಿಡಿಸಲಾಗಿದೆ. ಕಾರ್ಪೆಟ್ ಶೈಲಿ, ಬಣ್ಣ ಮತ್ತು ತಂತ್ರಜ್ಞಾನವನ್ನ ಆಧರಿಸಿ ಇದು ಅಂದು ಭಾರತದ ಭಾಗವಾಗಿದ್ದ ಲಾಹೋರ್`ನಲ್ಲಿ ತಯಾರಿಸಿರುವ ಕಾರ್ಪೆಟ್ ಎಂಬ ನಿರ್ಧಾರಕ್ಕೆ ಇತಿಹಾಸ ತಜ್ಞರು ಬಂದಿದ್ದಾರೆ.

ಹಡಗು ಮರಳಿನಲ್ಲಿ ಸೇರಿದ್ದರಿಂದ ಬಟ್ಟೆಯ ವಸ್ತುಗಳಿಗೆ ಯಾವುದೇ ಹಾನಿಯಾಗಿಲ್ಲ ಅಂತಾರೆ ತಂತ್ರಜ್ಞರು.