ಲಕ್ನೋ : ಲೋಕಸಭಾ ಚುನಾವಣೆ ನಡೆದು ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶ ಸರ್ಕಾರ 17 ಐಎಎಸ್ ಅಧಿಕಾರಿಗಳನ್ನು ಉತ್ತರ ಪ್ರದೇಶ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 

ಚಿತ್ರಕೂಟ, ವಿಶಾಕ ಜಿ ಅವರನ್ನು ಮುಖ್ಯಮಂತ್ರಿಗಳ ವಿಶೇಷ ಸೆಕ್ರೆಟರಿಗಳಾಗಿ ನೇಮಕ ಮಾಡಲಾಗಿದೆ. ಜಿತೇಂದ್ರ ಕುಮಾರ್ ಅವರನ್ನು ಲಕ್ನೋ ಕೇಡರ್ ಜಂಟಿ ನಿರ್ದೆಶಕರಾಗಿ ನೇಮಕ ಮಾಡಲಾಗಿದೆ. 

ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.  ಅಜಂಗರ್, ಬರಾಬಂಕಿ, ಸುಲ್ತಾನ್ ಪುರ, ಫಿರೋಜಾಬಾದ್ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. 

ಕರ್ನಾಟಕದಲ್ಲಿ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ 17 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.