ಪಾಟ್ನಾ (ಜ. 14): 40 ಜನರನ್ನು ಹೊತ್ತೊಯ್ಯುತ್ತಿದ್ದ  ಬೋಟ್ ವೊಂದು  ಗಂಗಾನದಿಯಲ್ಲಿ ಮುಳುಗಿ ಕನಿಷ್ಟ  18 ಮಂದಿ ಸಾವನ್ನಪ್ಪಿರುವ ದುರ್ಘಟನೆ ಇಂದು ಸಂಜೆ  ನ್ಯಾಷನಲ್ ಇನ್ಸ್ಇಟ್ಯೂಟ್ ಆಫ್ ಟೆಕ್ನಾಲಜಿ ಸಮೀಪದಲ್ಲಿರುವ ಘಾಟ್ ನಲ್ಲಿ ನಡೆದಿದೆ.

ಬೋಟ್ ಗೆ ಓವರ್ ಲೋಡ್ ಮಾಡಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. 20 ಮಂದಿ ಇನ್ನು ಪತ್ತೆಯಾಗಿಲ್ಲ. ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಪಡೆ ಸ್ಥಳಕ್ಕೆ ಧಾವಿಸಿದ್ದು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬೋಟ್ ನಲ್ಲಿ ಇದ್ದವರಲ್ಲಿ  25 ಮಂದಿ ಈಜು ಬಲ್ಲವರಾದರೂ 8 ಮಂದಿ ಮಾತ್ರ ಈಜಿ ದಡ ಸೇರಿದ್ದಾರೆ. ಅವರನ್ನು ಪಾಟ್ನಾ ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ಮಹಿಳೆಯ ದೇಹ ಪತ್ತೆಯಾಗಿದೆ ಎನ್ನಲಾಗಿದೆ.

ಏತನ್ಮಧ್ಯೆ ಘಟನೆ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶಿಸಿದ್ದಾರೆ.