8 ವರ್ಷದ ದೀಪು ಕುಮಾರ್ ಇದೇ ಸೋಮವಾರ ಕಾಣೆಯಾಗಿದ್ದ. ಮರುದಿನ ಖಾಲಿ ಪ್ಲಾಟ್‌'ವೊಂದರಲ್ಲಿ ಶಿರಚ್ಛೇದಗೈದ ಸ್ಥಿತಿಯಲ್ಲಿ ದೀಪುವಿನ ಶವ ದುರ್ಗಿ ಏರಿಯಾದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆಗಿಳಿದಿದ್ದರು. ತನಿಖೆಯ ವೇಳೆ ಈ ಏರಿಯಾದ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲಿಸಿದ್ದಾರೆ.

ಪಂಜಾಬ್(ಜ.21): ಕೇವಲ 16 ವರ್ಷದ ಯುವಕನೋರ್ವ 8 ವರ್ಷದ ಬಾಲಕನ ಕೊಲೆಗೈದು, ಅವನ ದೇಹವನ್ನು ತುಂಡರಿಸಿ, ಮಾಂಸ ತಿಂದು, ರಕ್ತ ಕುಡಿದ ಭೀಕರ ಕೃತ್ಯ ಪಂಜಾಬ್‌'ನ ಲೂಧಿಯಾನದಲ್ಲಿ ನಡೆದಿದೆ.

8 ವರ್ಷದ ದೀಪು ಕುಮಾರ್ ಇದೇ ಸೋಮವಾರ ಕಾಣೆಯಾಗಿದ್ದ. ಮರುದಿನ ಖಾಲಿ ಪ್ಲಾಟ್‌'ವೊಂದರಲ್ಲಿ ಶಿರಚ್ಛೇದಗೈದ ಸ್ಥಿತಿಯಲ್ಲಿ ದೀಪುವಿನ ಶವ ದುರ್ಗಿ ಏರಿಯಾದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆಗಿಳಿದಿದ್ದರು. ತನಿಖೆಯ ವೇಳೆ ಈ ಏರಿಯಾದ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲಿಸಿದ್ದಾರೆ.

ಈ ವೇಳೆ ಹತ್ಯೆಯಾದ ದೀಪು ಮತ್ತೊಬ್ಬ ಬಾಲಕನ ಜೊತೆಗಿರುವುದು ದೃಶ್ಯಾವಳಿಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ದೀಪುವಿನ ಕೊಲೆ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ. ಕೊಲೆಗೈದ ಆರೋಪಿ 8 ನೇ ತರಗತಿ ಓದುತ್ತಿದ್ದಾನೆ ಎಂದು ತಿಳಿದು ಬಂದಿದೆ.