ಒಂದಡೆ ದೂರದ ಉತ್ತರ ಪ್ರದೇಶದ ಗೊರಖಪೂರದಲ್ಲಿ ಆಕ್ಸಿಜನ್ ಮುಗಿದ ಕಾರಣ 60ಕ್ಕೂ ಹೆಚ್ಚಿನ ಮಕ್ಕಳು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿವೆ. ಆದ್ರೆ ಬೀದರ್'ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ಎಲ್ಲವು ಇದ್ದರೂ ಸೂಕ್ತ ಚಿಕಿತ್ಸೆ ಸಿಗದ ಕಾರಣ ಕಳೆದ 6 ತಿಂಗಳಲ್ಲಿ ದಾಖಾಲಾದ 502 ಶಿಶುಗಳ ಪೈಕಿ ಬರೋಬ್ಬರಿ 148 ಶಿಶುಗಳು ಸಾವನ್ನಪ್ಪಿವೆ.
ಬೀದರ್(ಆ.23): ಒಂದಡೆ ದೂರದ ಉತ್ತರ ಪ್ರದೇಶದ ಗೊರಖಪೂರದಲ್ಲಿ ಆಕ್ಸಿಜನ್ ಮುಗಿದ ಕಾರಣ 60ಕ್ಕೂ ಹೆಚ್ಚಿನ ಮಕ್ಕಳು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿವೆ. ಆದ್ರೆ ಬೀದರ್'ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ಎಲ್ಲವು ಇದ್ದರೂ ಸೂಕ್ತ ಚಿಕಿತ್ಸೆ ಸಿಗದ ಕಾರಣ ಕಳೆದ 6 ತಿಂಗಳಲ್ಲಿ ದಾಖಾಲಾದ 502 ಶಿಶುಗಳ ಪೈಕಿ ಬರೋಬ್ಬರಿ 148 ಶಿಶುಗಳು ಸಾವನ್ನಪ್ಪಿವೆ.
ಈ ಆಸ್ಪತ್ರೆಯಲ್ಲಿ ಎಲ್ಲವು ಇದೆ ಆದ್ರೆ ಸೂಕ್ತ ಚಿಕಿತ್ಸೆ ಫಲಿಸದ ಕಾರಣ ಮಕ್ಕಳ ಸಾವಿನ ಮೃದಂಗ ಮುಂದುವರೆದಿದೆ. ಈ 148 ಮಕ್ಕಳ ಸಾವಿನ ಬಗ್ಗೆ ನಾವು ಹೇಳುತ್ತಿಲ್ಲ. ಬ್ರೀಮ್ಸ್ ವೈದ್ಯರೆ ಕೊಟ್ಟಿರುವ ದಾಖಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಸಾವಿನ ಮನೆಯ ಕದ ತಟ್ಟಿರುವ ಮಕ್ಕಳ ಸಂಖ್ಯೆ ನಿಜಕ್ಕೂ ಗಾಬರಿ ಹುಟ್ಟಿಸುತ್ತೆ.
ಬ್ರೀಮ್ಸ್ ಗಡಿ ಜಿಲ್ಲೆ ಬೀದರ್ ವೈದ್ಯಕೀಯ ಮಹವಿದ್ಯಾನಿಲಯ. ಈಗ 750 ಹಾಸಿಗೆ ಆಸ್ಪತ್ರೆ. ಪ್ರತಿದಿನ ಸಾವಿರಾರು ಜನರು ಸೂಕ್ತ ಚಿಕಿತ್ಸೆಗಾಗಿ ಇಲ್ಲಿಗೆ ಬಂದು ಹೋಗುತ್ತಾರೆ. ಆದ್ರೆ ಈ ಆಸ್ಪತ್ರೆಯ ಮಕ್ಕಳ ವಾರ್ಡ್ ಬಂದ್ರೆ ಸಾಕು ಇದೊಂದು ಅತ್ಯುತ್ತಮ ಆಸ್ಪತ್ರೆಯ ವಾರ್ಡ್ ಅಂತಾ ಖುಷಿ ಪಡುವುದರಲ್ಲಿ ಅನುಮಾನವಿಲ್ಲ.
