ಅವರೆಲ್ಲರೂ  ಕೋಪದ ಕೈಗೆ ಬುದ್ದಿಕೊಟ್ಟು ಜೈಲುಪಾಲಾಗಿದ್ದವರು. ಮಾಡಿದ ತಪ್ಪಿನಿಂದಾಗಿ ಜೀವಾವದಿ ಶಿಕ್ಷೆಗೆ ಒಳಗಾಗಿ ಮತ್ತೆ ತಮ್ಮ ಕುಟುಂಬದವರೊಂದಿಗೆ ಸೇರಲು ಸಾದ್ಯವೇ ಇಲ್ಲ ಎಂದುಕೊಂಡಿದ್ದರು. ಆದರೆ ನಿನ್ನೆ ಸನ್ನಡತೆ ಆಧಾರದ ಮೇಲೆ ಜೈಲಿನಿಂದ 144 ಕೈದಿಗಳು ಬಿಡುಗಡೆಗೊಂಡಿದ್ದಾರೆ.

ಬೆಂಗಳೂರು(ಜ.27): ಅವರೆಲ್ಲರೂ ಕೋಪದ ಕೈಗೆ ಬುದ್ದಿಕೊಟ್ಟು ಜೈಲುಪಾಲಾಗಿದ್ದವರು. ಮಾಡಿದ ತಪ್ಪಿನಿಂದಾಗಿ ಜೀವಾವದಿ ಶಿಕ್ಷೆಗೆ ಒಳಗಾಗಿ ಮತ್ತೆ ತಮ್ಮ ಕುಟುಂಬದವರೊಂದಿಗೆ ಸೇರಲು ಸಾದ್ಯವೇ ಇಲ್ಲ ಎಂದುಕೊಂಡಿದ್ದರು. ಆದರೆ ನಿನ್ನೆ ಸನ್ನಡತೆ ಆಧಾರದ ಮೇಲೆ ಜೈಲಿನಿಂದ 144 ಕೈದಿಗಳು ಬಿಡುಗಡೆಗೊಂಡಿದ್ದಾರೆ.

68ನೇ ಗಣರಾಜ್ಯೋತ್ಸವ ಹಿನ್ನೆಲೆ ಸನ್ನಡತೆ ಆಧಾರ ಮೇಲೆ ರಾಜ್ಯದ್ಯಂತ 144 ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇವತ್ತು ಸಂಭ್ರಮ ಮನೆ ಮಾಡಿತು. ಯಾಕೆಂದರೆ 61 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಡೆ ಮಾಡಲಾಯಿತು. ತಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಅನುಭವಿಸಿದ ಕೈದಿಗಳನ್ನು ಗುರುತಿಸಿ ನಿನ್ನೆ ಬಿಡುಗಡೆ ಮಾಡಲಾಯಿತು. ಬಿಡುಗಡೆಗೊಂಡ ಕೈದಿಗಳಿಗೆ ಗೃಹ ಸಚಿವ ಪರಮೇಶ್ವರ್ ಶುಭ ಹಾರೈಸಿದರು.

ಈ ಬಾರಿ ಬೆಂಗಳೂರು ಕೇಂದ್ರ ಕಾರಾಗೃಹದಿಂದ 61, ಮೈಸೂರು ಜೈಲಿನಿಂದ 23, ಬೆಳಗಾವಿ ಜೈಲಿನಿಂದ 17, ಕಲಬುರಗಿ ಜೈಲಿನಿಂದ 18, ವಿಜಯಪುರ ಜೈಲಿನಿಂದ 16 ಹಾಗೂ ಬಳ್ಳಾರಿ ಜೈಲಿನಿಂದ 9 ಕೈದಿಗಳನ್ನು ಬಿಡುಗಡೆ ಮಾಡಲಾಯಿತು. ಇನ್ನು ಮುಂದೆ ಸಮಾಜದಲ್ಲಿ ಎಲ್ಲರಂತೆ ಬಾಳುವುದಾಗಿ ಬಿಡುಗಡೆಗೊಂಡ ಕೈದಿಗಳು ಹೇಳಿದರು.

ರವಿ ಎಂಬ ಕೈದಿ ತಾನು ಜೈಲಿನಲ್ಲಿ ಸಾಕಿಕೊಂಡಿದ್ದ ಬೆಕ್ಕನ್ನು ಮನೆಗೆ ಕೊಂಡೊಯ್ದನು. ಒಟ್ಟಿನಲ್ಲಿ ತಿಳಿದಿದ್ದೋ ತಿಳಿಯದೆಯೊ ಮಾಡಿದ ತಪ್ಪಿನಿಂದಾಗಿ ಸೆರೆಮನೆ ವಾಸ ಅನುಭವಿಸಿದ್ದ ಕೆಲ ಕೈದಿಗಳು ಸನ್ನಡತೆ ಅಧಾರದ ಮೇಲೆ ಮತ್ತೆ ಮನೆ ಸೇರಿದ್ದಾರೆ. ಇನ್ಮುಂದೆಯಾದ್ರೂ ಎಲ್ಲರಂತೆ ಸಮಾಜದಲ್ಲಿ ಬಾಳಿ-ಬದುಕಲಿ ಎಂಬುವುದೇ ನಮ್ಮ ಆಶಯ.