ಭಾರತೀಯ ಗಡಿ ಭದ್ರತಾ ಸಿಬ್ಬಂದಿಯಿಂದ ಕಳೆದ 7 ತಿಂಗಳಲ್ಲಿ ಪತ್ತೆಯಾದ ಎರಡನೇ ಸುರಂಗ ಮಾರ್ಗ ಇದಾಗಿದೆ. ಈ ಹಿಂದೆ ಸಾಂಬಾದ ರಾಮ್‌'ಗಢದಲ್ಲಿಯೂ ಸುರಂಗ ಪತ್ತೆಯಾಗಿತ್ತು.

ಶ್ರೀನಗರ(ಸೆ.30): ಕಳೆದ ಎರಡು ವಾರಗಳಿಂದ ಪಾಕಿಸ್ತಾನ ಪಡೆಗಳು ದಾಳಿ ನಡೆಸುತ್ತಿರುವ ಜಮ್ಮು-ಕಾಶ್ಮೀರದ ಗಡಿಭಾಗದಲ್ಲೇ ಪಾಕಿಸ್ತಾನದಿಂದ ಉಗ್ರರ ರವಾನೆಗಾಗಿ ಕೊರೆಯಲಾಗುತ್ತಿದ್ದ 14 ಅಡಿ ಉದ್ದದ ಗೌಪ್ಯ ಸುರಂಗ ಮಾರ್ಗವನ್ನು ಆರ್ನಿಯಾ ಸೆಕ್ಟರ್‌'ನ ಗಡಿ ಭದ್ರತಾ ಪಡೆಯ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.

ಭಾರತೀಯ ಗಡಿ ಭದ್ರತಾ ಸಿಬ್ಬಂದಿಯಿಂದ ಕಳೆದ 7 ತಿಂಗಳಲ್ಲಿ ಪತ್ತೆಯಾದ ಎರಡನೇ ಸುರಂಗ ಮಾರ್ಗ ಇದಾಗಿದೆ. ಈ ಹಿಂದೆ ಸಾಂಬಾದ ರಾಮ್‌'ಗಢದಲ್ಲಿಯೂ ಸುರಂಗ ಪತ್ತೆಯಾಗಿತ್ತು.

ಜಮ್ಮುವಿನಲ್ಲಿ ಹಬ್ಬದ ಸೀಸನ್‌'ನಲ್ಲಿ ಉಗ್ರ ದಾಳಿಯನ್ನು ಯೋಜಿಸಿ ಉಗ್ರರನ್ನು ಭಾರತದೊಳಕ್ಕೆ ರವಾನಿಸುವ ಉದ್ದೇಶದಿಂದಲೇ ಈ ಸುರಂಗ ಕೊರೆಯಲಾಗುತ್ತಿತ್ತು ಎನ್ನಲಾಗಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿರುವ ದಮಾನ ಬಳಿಯ ವಿಕ್ರಂ ಮತ್ತು ಪಟೇಲ್ ಪೋಸ್ಟ್‌'ಗಳಲ್ಲಿ ಸ್ವಚ್ಛತಾ ಕಾರ್ಯಾಚರಣೆ ಸಂದರ್ಭದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಪತ್ತೆಯಾಗಿದೆ.